ದೆಹಲಿಯಲ್ಲಿ (Delhi) ಆಪ್ ಮತ್ತು ಕಾಂಗ್ರೆಸ್ (AAP and Congress) ನಡುವಿನ ಸಂಬಂಧ ತೀವ್ರ ತಳಮಳಕ್ಕೆ ಒಳಗಾಗಿದೆ. ಕೇಜ್ರಿವಾಲ್ ಅವರ ಕಲ್ಯಾಣ ಯೋಜನೆಗಳನ್ನು ವಂಚನೆಯ ರೂಪದಲ್ಲಿ ಜನರಿಗೆ ತಲುಪಿಸುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದ್ದು, ಈ ಕಾರಣದಿಂದ ಆಪ್ ಕಾಂಗ್ರೆಸ್ ವಿರುದ್ಧ ಕೋಪಗೊಂಡಿದೆ.
ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ INDIA ಮೈತ್ರಿಕೂಟ, ನಂತರದ ವಿಧಾನಸಭಾ ಚುನಾವಣೆಯಲ್ಲಿ ತಳಮಳ ಅನುಭವಿಸುತ್ತಿದೆ. ಹಲವು ಪ್ರಾದೇಶಿಕ ಪಕ್ಷಗಳು, ವಿಶೇಷವಾಗಿ ತೃಣಮೂಲ ಕಾಂಗ್ರೆಸ್, ಶಿವಸೇನಾ (ಯುಬಿಟಿ), ಮತ್ತು ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ನಿಲುವಿನಿಂದ ಅಸಮಾಧಾನಗೊಂಡಿವೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, INDIA ಮೈತ್ರಿಕೂಟದ ನಾಯಕತ್ವ ವಹಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಲಾಲು ಯಾದವ್ ಸೇರಿದಂತೆ ಕೆಲ ನಾಯಕರು ಅದಕ್ಕೆ ಬೆಂಬಲ ನೀಡಿದ್ದಾರೆ.
ಬೆಳೆಗ್ಗೆ ಕಹಳೆ ಮೊಳಗಿದ ದೆಹಲಿ ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿಯ ನಡುವಿನ ಪೈಪೋಟಿ ತೀವ್ರವಾಗಿದ್ದು, ಕಾಂಗ್ರೆಸ್ ಕೂಡ ತನ್ನ 47 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲೂ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಪ್ರಮುಖರು. ಈ ನಡುವೆ, ಕೇಜ್ರಿವಾಲ್ ಕಾಂಗ್ರೆಸ್ ಅನ್ನು INDIA ಒಕ್ಕೂಟದಿಂದ ಹೊರಹಾಕುವ ಒತ್ತಾಯ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.