![Google X founder Sebastian Thrun Google X founder Sebastian Thrun](https://kannadatopnews.com/wp-content/uploads/2025/02/Photoshop_Online-news-copy-155.jpg)
Bengaluru: ಮುಂದಿನ ದಿನಗಳಲ್ಲಿ ನಮ್ಮ ಸಾವಿನ ನಂತರವೂ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಮಾತನಾಡಬಹುದಾಗಿದೆ. ಅಂತಹ ಸಾಧ್ಯತೆಯನ್ನು AI (artificial intelligence) ತರುವುದಾಗಿ ಗೂಗಲ್ ಎಕ್ಸ್ ಸಂಸ್ಥೆಯ ಸ್ಥಾಪಕ ಸೆಬಾಸ್ಟಿಯನ್ ಥ್ರನ್ (Google X founder Sebastian Thrun) ಭವಿಷ್ಯವಾಣಿ ಮಾಡಿದ್ದಾರೆ.
‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಏಐ ಪ್ರಗತಿಯನ್ನು ಊಹಿಸಲು ಸಾಧ್ಯವಿಲ್ಲ. 3 ವರ್ಷಕ್ಕೂ ಮೊದಲು ಚಾಟ್‌ಜಿಪಿಟಿ ಎಂಬುದೇ ಕಲ್ಪನೆಗೆ ಬಂದಿರಲಿಲ್ಲ. ಹೀಗೇ ಮುಂದಿನ 3 ವರ್ಷಗಳಲ್ಲಿ ಏಐ ಹೇಗಿರುತ್ತೆಂದು ಹೇಳಲು ಸಾಧ್ಯವಿಲ್ಲ’ ಎಂದರು.
ಅವರು ಎಐ ತಂತ್ರಜ್ಞಾನದಲ್ಲಿ ಕಂಡುಬರುವ ಬೆಳವಣಿಗೆಗಳ ಕುರಿತು ಮಾತನಾಡಿ, ‘ಆರಂಭದಲ್ಲಿ ಎಐ ಬಗ್ಗೆ ಭಯವಿತ್ತು, ಆದರೆ ಈಗ ಜನರು ಇದನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ’ ಎಂದರು.
ಅವರು ಮುಂದಿನ ದಿನಗಳಲ್ಲಿ ‘ಸತ್ತ ನಂತರವೂ ನಾವು ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳೊಂದಿಗೆ ಮಾತನಾಡಬಹುದು, ಮತ್ತು ಡಿಜಿಟಲ್ ಟ್ವಿನ್‌ನ ಮೂಲಕ ವಿವಿಧ ಕಾರ್ಯಗಳಲ್ಲಿ ಭಾಗವಹಿಸಬಹುದು’ ಎಂದು ಭವಿಷ್ಯವಾಣಿ ಮಾಡಿದರು.
‘ವೈಫಲ್ಯದಿಂದಲೇ ಸಫಲತೆ ಬರುತ್ತದೆ. ದೊಡ್ಡ ಕಂಪನಿಗಳಂತಹ ಗೂಗಲ್ ಕೂಡ ವೈಫಲ್ಯಗಳನ್ನು ಅನುಭವಿಸಿದೆ. ಆದರೆ ಅದರಿಂದ ಹಿಂದೇಟು ಹೊತ್ತವರೇ ಮುಂದುವರಿದಿದ್ದಾರೆ’ ಎಂದ ಅವರು.
ಇಂದಿನ ದಿನಗಳಲ್ಲಿ ಇಬ್ಬರೇ ಇದ್ದರೂ ಸಾಕು ಕಂಪನಿಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಬಹುದು. ಎಐ ಮತ್ತಿತರ ತಂತ್ರಜ್ಞಾನಗಳ ನೆರವಿನಿಂದ ಇದು ಸಾಧ್ಯವಾಗಿದೆ’ ಎಂದು ವಿವರಿಸಿದರು.