back to top
19.2 C
Bengaluru
Sunday, October 12, 2025
HomeKarnatakaChikkaballapura68ನೇ ಧಮ್ಮ ಚಕ್ರ ಪ್ರವರ್ತನ ದಿನ: Bike Rally

68ನೇ ಧಮ್ಮ ಚಕ್ರ ಪ್ರವರ್ತನ ದಿನ: Bike Rally

- Advertisement -
- Advertisement -

Chikkaballapur : ‘ಯುದ್ಧ ಬೇಡ ಬುದ್ಧ ಬೇಕು, ನಮ್ಮ ನಡೆ ಬುದ್ಧನ ಕಡೆ’ ಎಂಬ ಸಂದೇಶದೊಂದಿಗೆ ಸೋಮವಾರ ಚಿಕ್ಕಬಳ್ಳಾಪುರ ನಗರದಲ್ಲಿ ಬುದ್ದ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿಜಯದಶಮಿ ಮತ್ತು 68ನೇ ಧಮ್ಮ ಚಕ್ರ ಪ್ರವರ್ತನ ದಿನದ (DhammaChakra Pravartan Din) ಅಂಗವಾಗಿ Bike Rally ನಡೆಸಿ ಸಂವಿಧಾನ ಪೀಠಿಕೆ, ತಿಸರಣ ಪಂಚಶೀಲಗಳ ಪ್ರತಿಜ್ಞೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ “1956ರ ಅ.14 ಧಮ್ಮ ಚಕ್ರ ಪ್ರವರ್ತನ ದಿನದಂದು ಸಮಾನತೆಯ ಪ್ರಬುದ್ಧ ಭಾರತದ ಸಂದೇಶವನ್ನು ಸಾರಲು 4 ಲಕ್ಷ ಅನುಯಾಯಿಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ದ ಧಮ್ಮ ದೀಕ್ಷೆ ನಾಗಪುರದಲ್ಲಿ ಪಡೆದ ಸಂಕೇತವಾಗಿ ಧಮ್ಮ ಚಕ್ರ ಪ್ರವರ್ತನ ದಿನದವನ್ನು ಆಚರಿಸಲಾಗುತ್ತಿದ್ದು ಶಾಂತಿ, ಸಹನೆ, ಕರುಣೆ, ಸಂದೇಶ ಸಾರಿದ ಗೌತಮ ಬುದ್ಧ, ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನವನ್ನು ಓದಿ ತಿಳಿದುಕೊಳ್ಳುವ ಜೊತೆಗೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಈ ಮೂಲಕ ನಾಡಿನಾದ್ಯಂತ ಶಾಂತಿ ನೆಲೆಸಬೇಕಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಜಿ.ಶ್ರೀನಿವಾಸ್, ವಕೀಲ ಮುನಿರಾಜು, ಉಸ್ಮಾನ್, ಕಾಂತರಾಜ್, ಬಾಲಕೃಷ್ಣ, ಜೀವಿಕ ಸಂಘಟನೆಯ ಶ್ರೀನಿವಾಸ್, ಮೂರ್ತಿ, ಮೂರ್ತಿ, ಶ್ರೇಯಸ್, ಅಂಜನ್‌ರೆಡ್ಡಿ, ಬಾಲಕೃಷ್ಣ, ಕಲ್ಯಾಣ್, ನರೇಂದ್ರ, ರವೀಂದ್ರ, ಪ್ರಜ್ವಲ್, ಬುದ್ಧ ಫೌಂಡೇಶನ್ ಮಂಚನಬಲೆ ಗಂಗರಾಜು, ಡ್ಯಾನ್ಸ್ ಶ್ರೀನಿವಾಸ್, ರಂಗಭೂಮಿ ಕಲಾವಿದ ವೇಣು, ಗಂಗಾಧರ್, ಜನ ಕಲಾರಂಗದ ವೆಂಕಟ್, ರಾಮ್, ಮುರಳಿ, ಛಲವಾದಿ ಪ್ರಕಾಶ್, ವೆಂಕಟಕೃಷ್ಣ, ಟಿ.ಟಿ.ನರಸಿಂಹಪ್ಪ, ಸುಶೀಲ ಮಂಜುನಾಥ್ ಉಪಸ್ಥಿತರಿದ್ದರು.

The post 68ನೇ ಧಮ್ಮ ಚಕ್ರ ಪ್ರವರ್ತನ ದಿನ: Bike Rally appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page