ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂ.ಎಸ್. ಧೋನಿ, (M.S. Dhoni) ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವು ದಾಖಲಿಸಿದೆ. ಲಕ್ನೋ ಮೊದಲು ಬ್ಯಾಟಿಂಗ್ ಮಾಡಿ 166 ರನ್ ಗಳಿಸಿತ್ತು. ರಿಷಭ್ ಪಂತ್ 63 ರನ್ ಗಳಿಸಿ ತಂಡಕ್ಕೆ ನೆರವಾದರು.
ಧೋನಿ, ಕೊನೆ ಹಂತದಲ್ಲಿ ಬ್ಯಾಟಿಂಗ್‌ಗೆ ಬಂದು ಕೇವಲ 11 ಎಸೆತಗಳಲ್ಲಿ 26 ರನ್ ಗಳಿಸಿದರು. ಈ ಆಟದಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಇರಿತು. ಶಿವಂ ದುಬೆಯ ಜೊತೆ ಉತ್ತಮ ಜೊತೆಯಾಟವಾಡಿದ ಧೋನಿ, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಧೋನಿ ಈ ಪಂದ್ಯದಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಪಾತ್ರರಾದರು. 43 ವರ್ಷ 282 ದಿನ ವಯಸ್ಸಿನ ಧೋನಿ, ಐಪಿಎಲ್ ಇತಿಹಾಸದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಹಿರಿಯ ಆಟಗಾರರು ಪಡೆದ ಪಂದ್ಯ ಶ್ರೇಷ್ಠ ಪ್ರಶಸ್ತಿ
- ಎಂಎಸ್ ಧೋನಿ – 43 ವರ್ಷ 282 ದಿನ (2025)
- ಪ್ರವೀಣ್ ತಾಂಬೆ – 42 ವರ್ಷ 209 ದಿನ (2014)
- ಶೇನ್ ವಾರ್ನ್ – 41 ವರ್ಷ 223 ದಿನ (2011)
- ಶೇನ್ ವಾರ್ನ್ – 41 ವರ್ಷ 211 ದಿನ (2011)
- ಆಡಮ್ ಗಿಲ್ಕ್ರಿಸ್ಟ್ – 41 ವರ್ಷ 181 ದಿನ (2013)
- ಕ್ರಿಸ್ ಗೇಲ್ – 41 ವರ್ಷ 35 ದಿನ (2020)
- ಶೇನ್ ವಾರ್ನ್ – 40 ವರ್ಷ 204 ದಿನ (2010)
- ಆಡಮ್ ಗಿಲ್ಕ್ರಿಸ್ಟ್ – 40 ವರ್ಷ 185 ದಿನ (2012)
- ರಾಹುಲ್ ದ್ರಾವಿಡ್ – 40 ವರ್ಷ 85 ದಿನ (2013)