back to top
20.7 C
Bengaluru
Monday, July 21, 2025
HomeHealthಇರುವೆಗಳ ಕೃಪೆಯಿಂದ ಸಕ್ಕರೆ ಕಾಯಿಲೆ ನಾಶ? ದೇವಾಲಯದ ವಿಚಿತ್ರ ಪವಾಡ

ಇರುವೆಗಳ ಕೃಪೆಯಿಂದ ಸಕ್ಕರೆ ಕಾಯಿಲೆ ನಾಶ? ದೇವಾಲಯದ ವಿಚಿತ್ರ ಪವಾಡ

- Advertisement -
- Advertisement -

ತಮಿಳುನಾಡಿನ ತಂಜಾವೂರು ಬಳಿ ಇರುವ ಅಮ್ಮಪೇಟೆ ಎಂಬ ಗ್ರಾಮದಲ್ಲಿ Karumbeshwar (ಕರುಂಬೇಶ್ವರ) ದೇವಸ್ಥಾನ ಇದೆ. ಈ ದೇವಸ್ಥಾನವನ್ನು ವಿಶೇಷವಾಗಿಸೋ ಕಾರಣವೆಂದರೆ, ಇಲ್ಲಿ ಸಕ್ಕರೆ ಕಾಯಿಲೆ (ಡಯಾಬಿಟಿಸ್) ವಾಸಿಯಾಗುತ್ತದಂತೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ನಡೆವ ಪವಾಡಗಳನ್ನು ಕಂಡು ಜನ ನಂಬದಿರಲು ಸಾಧ್ಯವಿಲ್ಲ.

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಮೂಲ ಕಾರಣ ಎಂದರೆ ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿ. ಒಮ್ಮೆ ಕಾಯಿಲೆ ಬಂದರೆ ಅದರಿಂದ ಪೂರ್ತಿ ಗುಣಮುಖರಾಗುವುದು ಬಹಳ ಕಷ್ಟ. ಆದರೆ, ಈ Karumbeshwar ದೇವಾಲಯಕ್ಕೆ ಬರುವವರು ಅರ್ಧ ಕೆಜಿ ರವೆ ಮತ್ತು ಅರ್ಧ ಕೆಜಿ ಸಕ್ಕರೆಯನ್ನು ಮಿಶ್ರಣ ಮಾಡಿ ತರುವಂತೆ ಸೂಚಿಸಲಾಗಿದೆ.

ದೇವಾಲಯದ ಪೂಜೆಯ ನಂತರ ಆ ಮಿಶ್ರಣವನ್ನು ಹೊರಬಾಗಿಲಲ್ಲಿ ಇಡುತ್ತಾರೆ. ಅಲ್ಲಿಗೆ ಬಂದಿರುವ ಇರುವೆಗಳು ರವೆಯನ್ನು ತೊರೆದು ಕೇವಲ ಸಕ್ಕರೆಯನ್ನು ಮಾತ್ರ ತಿಂದು ಹೋಗುತ್ತವೆ. ವಿಶೇಷವೆಂದರೆ, ಇದನ್ನು ಮಾಡಿದವರು ಮತ್ತೆ ವೈದ್ಯರನ್ನು ಭೇಟಿಯಾದಾಗ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ ಎಂದು ಕಂಡುಬರುತ್ತದೆ.

ಈ ಪವಾಡದ ಬಗ್ಗೆ ವೈದ್ಯರು ಮತ್ತು ವಿಜ್ಞಾನಿಗಳು ಕೂಡ ಪರಿಶೀಲನೆ ಮಾಡಿದ್ದಾರೆ. ಅವರನ್ನು ಕೂಡ ನಿಬ್ಬೆರಗಾಗಿಸುವಂತಹ ವರದಿಗಳು ಬಂದಿವೆ. ಕೆಲವರು ಇದನ್ನು ದೇವರ ಕೃಪೆ ಎಂದು ನಂಬುತ್ತಾರೆ, ಅಲ್ಲದೆ ಈ ಇರುವೆಗಳನ್ನು ‘ದೇವರ ಇರುವೆಗಳು’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ.

ಇದಲ್ಲದೇ, ಈ ದೇವಾಲಯದ ಇತಿಹಾಸವೂ ಶ್ರೀಕೃಷ್ಣನಿಗೆ ಸಂಬಂಧವಿದ್ದು ಸುಮಾರು 5000 ವರ್ಷ ಹಳೆಯದು ಎಂದು ನಂಬಲಾಗಿದೆ. ವಿದೇಶಗಳಿಂದಲೂ ಜನರು ಇಲ್ಲಿ ಬಂದು ಸಕ್ಕರೆ ಕಾಯಿಲೆಯಿಂದ ಮುಕ್ತರಾಗಿರುವುದಾಗಿ ಹೇಳುತ್ತಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page