Washington DC: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಟ್ರಂಪ್ 2.0 ಆಡಳಿತಕ್ಕಾಗಿ ಪೋರ್ಚುಗಲ್ ಮತ್ತು ಮಾಲ್ಟಾ ದೇಶಗಳಿಗೆ ಹೊಸ ರಾಯಭಾರಿಗಳನ್ನು ನಾಮ ನಿರ್ದೇಶನ ಮಾಡಿದ್ದಾರೆ.
ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್‌ಫಾರ್ಮ್ನ ಮೂಲಕ ಈ ಮಾಹಿತಿಯನ್ನು ಬುಧವಾರ ಹಂಚಿಕೊಂಡರು. ಜಾನ್ ಆರಿಗೊ ಅವರನ್ನು ಪೋರ್ಚುಗಲ್‌ಗೆ ಅಮೆರಿಕದ ರಾಯಭಾರಿಯಾಗಿ ಘೋಷಿಸಿದ್ದಾರೆ.
“ಜಾನ್ ಆರಿಗೊ ಅತ್ಯಂತ ಯಶಸ್ವಿ ಉದ್ಯಮಿ ಮತ್ತು ಚಾಂಪಿಯನ್ ಗಾಲ್ಫ್ ಆಟಗಾರ. ಅವರು ವೃತ್ತಿಪರತೆಯಲ್ಲಿ ತಮ್ಮ ಉತ್ತಮ ನಾಯಕತ್ವದಿಂದ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ನಮ್ಮ ದೇಶವನ್ನು ಉನ್ನತ ಮಟ್ಟಕ್ಕೆ ತಲುಪಿಸಲು ಅವರು ಶ್ರಮಿಸುತ್ತಾರೆ” ಎಂದು ಟ್ರಂಪ್ ಹೇಳಿದ್ದಾರೆ.
ಅವರು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಆಟೋ ಗ್ರೂಪ್‌ನ ಉಪಾಧ್ಯಕ್ಷರಾಗಿದ್ದಾರೆ, ಅಲ್ಲಿ ಟ್ರಂಪ್ ತಮ್ಮ Mar-a-Lago ರೆಸಾರ್ಟ್ನಲ್ಲಿ ಸಭೆಗಳನ್ನು ಆಯೋಜಿಸುತ್ತಾರೆ.
ಮತ್ತೊಂದು ಘೋಷಣೆಯಲ್ಲಿ, ಸೋಮರ್ಸ್ ಫರ್ಕಾಸ್ ಅವರನ್ನು ಮಾಲ್ಟಾಗೆ ಯುನೈಟೆಡ್ ಸ್ಟೇಟ್ಸ್ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ. “ಅವರು ಮಾದರಿ, ಲೋಕೋಪಕಾರಿ, ಸಾಕ್ಷ್ಯಚಿತ್ರ ನಿರ್ಮಾಪಕಿ ಮತ್ತು ಯಶಸ್ವಿ ಉದ್ಯಮಿ. ಸಾಮಾಜಿಕ ಸೇವೆಯಲ್ಲಿ ಅವರು ಪ್ರಮುಖ ಕೊಡುಗೆ ನೀಡಿದ್ದು, ಅನೇಕ ಚಾರಿಟಿ ಸಂಸ್ಥೆಗಳಿಗೆ ಮಿಲಿಯನ್ ಡಾಲರ್‌ಗಳಷ್ಟು ನೆರವನ್ನು ನೀಡಿದ್ದಾರೆ, ಅವರು ಪ್ರಾಣಿಗಳ ಹಿತಾಸಕ್ತಿಗೆ ಮತ್ತು ವಿವಿಧ ಚಾರಿಟಿ ಸಂಘಟನೆಗಳಿಗೆ ಧನಸಹಾಯ ಮಾಡಿದ್ದಾರೆ.” ಎಂದು ಟ್ರಂಪ್ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಈ ನಾಮನಿರ್ದೇಶನಗಳು ಟ್ರಂಪ್ 2.0 ಆಡಳಿತಕ್ಕೆ ಪ್ರಾರಂಭದ ಹೆಜ್ಜೆ ಎಂದು ಹೇಳಬಹುದು.