ಅಮೆರಿಕದ ಇತಿಹಾಸದಲ್ಲೇ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೊಸ ಇತಿಹಾಸ ಬರೆಯಲು ಇದೀಗ ಕಮಲಾ ಹ್ಯಾರಿಸ್ (Kamala Harris) ಅವರು ಸಜ್ಜಾಗಿದ್ದಾರೆ. ಇದೇ ಕಾರಣಕ್ಕೆ ಕಮಲಾ ಅಮೆರಿಕದಲ್ಲಿ (America US) ಪ್ರತಿಯೊಂದು ರಾಜ್ಯಗಳಿಗೂ ಹೋಗಿ, ಅಧ್ಯಕ್ಷೀಯ ಚುನಾವಣೆಗೆ (presidential election) ಪ್ರಚಾರ ನಡೆಸುತ್ತಿದ್ದಾರೆ.
ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಪರವಾಗಿ ಮಹಿಳೆಯರ ಬೆಂಬಲ ಹೆಚ್ಚಾಗಿದ್ದು, ಇದು ಕಮಲಾ ಹ್ಯಾರಿಸ್ (Kamala Harris) ಗೆಲುವಿನ ಮುನ್ಸೂಚನೆ ಎಂಬ ವಿಶ್ಲೇಷಣೆಗಳು ಕೂಡ ಕೇಳಿ ಬಂದಿದೆ.
ಅಮೆರಿಕದಲ್ಲಿ ಒಂದು ಬಾರಿ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ 2020ರ ಚುನಾವಣೆ ಸಮಯದಲ್ಲಿ ಭಾರಿ ಅಸಮಾಧಾನ ಇತ್ತು.
ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಎದುರು ಸೋತು ಮನೆಗೆ ಹೋದರು.
ಆದರೆ ಮತ್ತೊಮ್ಮೆ, ಅಮೆರಿಕದ ಅಧ್ಯಕ್ಷೀಯ ಸ್ಥಾನ ಪಡೆಯಬೇಕು ಎಂಬ ಹಠದಲ್ಲಿ ಟ್ರಂಪ್ ಹೋರಾಟ ಶುರು ಆಗಿದೆ. ಇಂತಹ ಸಮಯದಲ್ಲೇ ಟ್ರಂಪ್ ಅವರಿಗೆ ಮಹಿಳೆಯರ ಬೆಂಬಲ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದು ಟ್ರಂಪ್ ಅವರಿಗೆ ಆಘಾತ ನೀಡಿದ್ದರೆ ಕಮಲಾ ಬೆಂಬಲಿಗರಲ್ಲಿ ಹುಮ್ಮಸ್ಸು ತುಂಬಿದೆ.
ಈಗಿರುವ ಮಾಹಿತಿ ಪ್ರಕಾರ ಡೊನಾಲ್ಡ್ ಟ್ರಂಪ್ ಅವರಿಗೆ ಅತಿಹೆಚ್ಚಾಗಿ ಬೆಂಬಲ ಸಿಗುತ್ತಿರುವುದು ಪುರುಷರಿಂದ. ಆದರೆ ಅಮೆರಿಕದ ಮಹಿಳಾ ಮತದಾರರ ಮನಸ್ಸು ಗೆಲ್ಲುವಲ್ಲಿ ಡೊನಾಲ್ಡ್ ಟ್ರಂಪ್ ಯಶಸ್ವಿ ಆಗಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಮತ್ತೊಂದ್ಕಡೆ, ಆಫ್ರಿಕನ್ ಅಮೆರಿಕನ್ ಮತದಾರರ ವೋಟ್ ಹೆಚ್ಚಾಗಿ ಟ್ರಂಪ್ ಅವರಿಗೆ ಬೀಳುವುದಿಲ್ಲ. ಇಂತಹ ಸಮಯ ಕಮಲಾ ಹ್ಯಾರಿಸ್ ಅವರಿಗೆ ವರದಾನವಾಗಿ ಪರಿಣಮಿಸಿದೆ.
ಅಲ್ಲದೆ ಕಮಲಾ ಹ್ಯಾರಿಸ್ ಅದ್ಧೂರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅಮೆರಿಕ ಮತದಾರನ ಒಲವು ಯಾರ ಪರವಾಗಿ? ಅನ್ನೋದು ಮುಂದಿನ ತಿಂಗಳು ಗೊತ್ತಾಗಲಿದೆ.
ಅಮೆರಿಕದ ಅಧ್ಯಕ್ಷರಾಗಲು ಎಲೆಕ್ಟೊರೋಲ್ ಕಾಲೇಜಿನ 538 ಮತಗಳ ಪೈಕಿ ಕನಿಷ್ಠ 270 ಮತಗಳನ್ನು ಪಡೆಯಲೇಬೇಕು. ಸಮನಾಗಿ ಮತಗಳ ಬಿದ್ದರೇ ಅಧ್ಯಕ್ಷರನ್ನು ಹೌಸ್ ಆಫ್ ರಿಪ್ರೆಸಿಂಟವ್ಸ್ ಅಧ್ಯಕ್ಷರ ಮತದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಎಲೆಕ್ಟೊರೋಲ್ ಕಾಲೇಜಿನಲ್ಲಿನ ಪ್ರತಿನಿಧಿಗಳನ್ನು ಜನರೇ ನೇರವಾಗಿ ಆಯ್ಕೆ ಮಾಡುತ್ತಾರೆ. ಅವರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.