Vijayanagara: ಕತ್ತೆ ಹಾಲಿಗೆ (Donkey Milk) ಬಹಳ ಬೇಡಿಕೆ ಇರುವುದನ್ನು ದುರುಪಯೋಗ ಮಾಡಿಕೊಂಡು ರೈತರಿಗೆ ವಂಚನೆ ಮಾಡಲಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಈ ವಂಚನೆ ನಡೆದಿದೆ. ಸುಮಾರು 318 ರೈತರು ದೂರು ನೀಡಿದ್ದು, ಸರ್ಕಾರ ಹಗರಣದ (scam) ತನಿಖೆಯನ್ನು CIDಗೆ ವಹಿಸಿದೆ.
ಆಂಧ್ರ ಪ್ರದೇಶದ ಮೂಲದ ಜೆನ್ನಿಮಿಲ್ಕ್ ಕಂಪನಿ (Jennymilk Company) ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶಾಖೆ ಆರಂಭಿಸಿತ್ತು.
ಕತ್ತೆ ಸಾಕಲು ಮೂರು ವರ್ಷದ ಒಪ್ಪಂದ ಮಾಡಿಕೊಂಡು, ರೈತರಿಂದ ತಲಾ 3 ಲಕ್ಷ ಪಡೆದು, ಮೂರು ಹೆಣ್ಣು ಕತ್ತೆಗಳನ್ನು ನೀಡಿತ್ತು. ಕತ್ತೆ ಹಾಲನ್ನು ಲೀಟರ್‌ಗೆ 2,350 ರೂ. ದರದಲ್ಲಿ ಕೊಂಡುಕೊಳ್ಳುವುದಾಗಿ ಕಂಪನಿ ಭರವಸೆ ನೀಡಿತ್ತು.
ಸದ್ಯದ ಮಾಹಿತಿ ಪ್ರಕಾರ 318 ರೈತರು ಕತ್ತೆಗಳನ್ನು ಖರೀದಿ ಮಾಡಿದ್ದಾರೆ. ಕತ್ತೆ ಹಾಲನ್ನು ಖರೀದಿ ಮಾಡಿದರೂ ಸಹ ಹಣ ಪಾವತಿ ಮಾಡಿರಲಿಲ್ಲ. ಈ ಕುರಿತು ಮೊದಲು ಸೆಪ್ಟೆಂಬರ್ 19ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕತ್ತೆ ಹಾಲು ಕೊಳ್ಳುವ ಭರವಸೆ, ಕತ್ತೆಯನ್ನು ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲಾಧ್ಯಕ್ಷ ಟಿ. ನಾಗರಾಜ್, ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ್ ಅವರಿಗೆ ದೂರು ಸಹ ಸಲ್ಲಿಸಿದ್ದವು.
ಕತ್ತೆಗಳ ಸಾಕಾಣಿಕೆ ಯೋಜನೆ ಕಂಪನಿಯಾದ ಜೆನ್ನಿಮಿಲ್ಕ್ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.
ಕತ್ತೆ ಹಾಲನ್ನು ಹೆಚ್ಚಿನ ದರಕ್ಕೆ ಖರೀದಿ ಮಾಡುವುದಾಗಿ ಭರವಸೆಯನ್ನು ನೀಡಿ 3 ಲಕ್ಷಕ್ಕೆ 3 ಕತ್ತೆಗಳನ್ನು ಮಾರಾಟ ಮಾಡಿ ರೈತರಲ್ಲಿ ಗೊಂದಲವನ್ನು ಕಂಪನಿ ಸೃಷ್ಟಿ ಮಾಡುತ್ತಿದೆ.
ಇದರಿಂದಾಗಿ ಹಳ್ಳಿಗಳ ರೈತರು ಆರ್ಥಿಕವಾಗಿ ನಷ್ಟ ಉಂಟು ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಇದರಿಂದಾಗಿ ಆರ್ಥಿಕವಾಗಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.
ಪ್ರತಿ ಕತ್ತೆಗೆ 20-30 ಸಾವಿರ ಇರುತ್ತದೆ. ಆದರೆ ರೈತರಿಂದ 1 ಲಕ್ಷ ರೂ. ಕಟ್ಟಿಸಿಕೊಂಡು ಕತ್ತೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಹಳ್ಳಿಯಲ್ಲಿ ರೈತರ ಮಕ್ಕಳಿಂದ ದುಡ್ಡುಕಟ್ಟಿಸಿಕೊಂಡು ಕಂಪನಿ ಲಾಭ ಮಾಡಿಕೊಳ್ಳುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.