back to top
20.8 C
Bengaluru
Thursday, October 30, 2025
HomeNewsನೀವು ನಮಗೆ ಪಾಠ ಹೇಳಬೇಡಿ: US ಗೆ ತಕ್ಕ ಉತ್ತರ ಕೊಟ್ಟ Indian Army

ನೀವು ನಮಗೆ ಪಾಠ ಹೇಳಬೇಡಿ: US ಗೆ ತಕ್ಕ ಉತ್ತರ ಕೊಟ್ಟ Indian Army

- Advertisement -
- Advertisement -

Delhi: ಅಮೆರಿಕ, ರಷ್ಯಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸದಿದ್ದರೆ ಸುಂಕ ಹೆಚ್ಚಿಸುತ್ತೇವೆ ಎಂದು ಭಾರತವನ್ನು ಬೆದರಿಸುತ್ತಿದೆ. ಇದಕ್ಕೆ ಭಾರತೀಯ ಸೇನೆ (Indian Army) ಗಟ್ಟಿ ಉತ್ತರ ನೀಡಿದೆ. “ನಮಗೆ ಬೋಧನೆ ಕೊಡಬೇಡಿ, 1954ರಿಂದ ನಾವು 2 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ನಿಮ್ಮಿಂದ ಖರೀದಿಸಿದ್ದೇವೆ ಎಂಬುದು ನಮಗೆ ಗೊತ್ತಿದೆ” ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ 1971ರ ಹಳೆಯ ಪತ್ರಿಕೆ ತುಣುಕೊಂದನ್ನು ಹಂಚಿದ್ದು, ಪಾಕಿಸ್ತಾನಕ್ಕೆ ದಶಕಗಳಿಂದ ಅಮೆರಿಕ ಶಸ್ತ್ರಾಸ್ತ್ರಗಳನ್ನು ನೀಡುತ್ತಿರುವ ಬಗ್ಗೆ ಸಾಕ್ಷ್ಯವಿದೆ. ಆಗಿನ ರಕ್ಷಣಾ ಸಚಿವ ವಿ.ಸಿ. ಶುಕ್ಲಾ ಅವರು ರಾಜ್ಯಸಭೆಯಲ್ಲಿ ನೀಡಿದ ಉತ್ತರವನ್ನುnote ಮಾಡಿ, ಸೋವಿಯತ್ ಒಕ್ಕೂಟ ಮತ್ತು ಫ್ರಾನ್ಸ್ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ನೀಡಲು ನಿರಾಕರಿಸಿದ್ದರೂ, ಅಮೆರಿಕ ಮಾತ್ರ ಪೂರೈಕೆ ಮುಂದುವರೆಸಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಮತ್ತು ಚೀನಾ ಎರಡೂ ಪಾಕಿಸ್ತಾನಕ್ಕೆ ಅಗ್ಗದ ಬೆಲೆಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದು, ಇದೇ ಶಸ್ತ್ರಾಸ್ತ್ರಗಳಿಂದ ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ನರಮೇಧ ಮತ್ತು ಭಾರತದ ವಿರುದ್ಧ ಯುದ್ಧ ನಡೆಸಿತು ಎಂದು ಅವರು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ರಷ್ಯಾದಿಂದ ತೈಲ ಖರೀದಿಸುವುದರ ಮೇಲೆ ಭಾರತವನ್ನು ದೂಷಿಸುತ್ತಿರುವ ಅಮೆರಿಕದ ನಿಲುವು ದ್ವಂದ್ವಮಯವಾಗಿರುವುದಾಗಿ ಭಾರತೀಯ ಸೇನೆ ಹೇಳಿದ್ದಾರೆ. ಏಕೆಂದರೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳೇ ರಷ್ಯಾದೊಂದಿಗೆ ತಮ್ಮ ವ್ಯಾಪಾರವನ್ನು ಮುಂದುವರೆಸಿವೆ.

1971ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನಾ ಯುದ್ಧವು ಡಿಸೆಂಬರ್ 16ರಂದು ಪಾಕಿಸ್ತಾನದ ಸೋಲಿನಿಂದ ಮುಕ್ತಾಯಗೊಂಡಿತು. ಈ ಯುದ್ಧದ ಕೊನೆಗೆ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಹುಟ್ಟಿಕೊಂಡಿತು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page