ಕೇಂದ್ರ ಬಜೆಟ್ 2025 (Union Budget 2025) ಮೇಲೆ ದೇಶಾದ್ಯಾಂತ ಜನರ ಕಣ್ಣು. ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಡಾಲರ್ ಎದುರು ರೂಪಾಯಿ ಕುಸಿತ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತ್ತು ಆರ್ಥಿಕ ಬೆಳವಣಿಗೆಯ ನಡುವೆಯೂ ಕೇಂದ್ರ ಬಜೆಟ್ ಮಂಡನೆ ನಡೆಯಲಿದೆ.
ಬಜೆಟ್ ಸಮಯದಲ್ಲಿ ಹಲವು ಘೋಷಣೆಗಳು ಇರುತ್ತವೆ. ಈ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸರ್ಕಾರ ‘Union Budget App’ ಬಿಡುಗಡೆ ಮಾಡಿದೆ. ಈ ಆಪ್ ಅನ್ನು ಡೌನ್‌ಲೋಡ್ ಮಾಡಿ, ನಿಮ್ಮ ಮೊಬೈಲ್‌ನಲ್ಲಿ ಬಜೆಟ್ ಸಂಬಂಧಿತ ಎಲ್ಲ ಮಾಹಿತಿಯನ್ನು ಕಾಣಬಹುದು.
‘ಯೂನಿಯನ್ ಬಜೆಟ್ ಆಪ್’ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಡೌನ್‌ಲೋಡ್ ಮಾಡಬಹುದು. ಈ ಆಪ್‌ನಲ್ಲಿ ನೀವು ಬಜೆಟ್ ಭಾಷಣದಿಂದ ಮುಖ್ಯಾಂಶಗಳು, ಡಾಕ್ಯುಮೆಂಟ್ ಗಳು ಮತ್ತು PDF ರೂಪದಲ್ಲಿ ಎಲ್ಲ ಮಾಹಿತಿಯನ್ನು ಪಡೆಯಬಹುದು. ನೀವು ಭಾಷೆ ಆಯ್ಕೆಮಾಡಬಹುದು ಮತ್ತು ನಿಮಗೆ ಬೇಕಾದ ದಾಖಲೆಗಳನ್ನು ಓದಬಹುದು.
Appನ ವಿಶೇಷತೆಗಳು
- ಲಿಖಿತ ರೂಪದಲ್ಲಿ ಮಾಹಿತಿಯನ್ನು ಪಡೆಯಲು
- PDF ಸ್ವರೂಪದಲ್ಲಿ ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಬಹುದು
- ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ
- ಈ ಆಪ್‌ನಿಂದ ನೀವು ಬಜೆಟ್‌ಗೊಂದಿದ್ದ ಎಲ್ಲಾ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು ಮತ್ತು ಇತರರಿಗೆ ವಿವರಿಸಬಹುದು.