ಬೆಂಗಳೂರು: ರಾಜ್ಯದ ಜನತೆ ಮತ್ತೊಂದು ಶಾಕ್ ನ ಅನುಭವಕ್ಕೆ ತಯಾರಾಗಬೇಕು. ಈಗಾಗಲೇ ಬಸ್, ಮೆಟ್ರೋ, ಹಾಲಿನ ದರ ಹೆಚ್ಚಳದಿಂದ ಬೇಸತ್ತ ಜನರಿಗೆ ಈಗ ವಿದ್ಯುತ್ ದರ (Electricity bill) ಏರಿಕೆ ಕಸರತ್ತು ಶುರುವಾಗಿದೆ.
Karnataka Electricity Regulatory Commission (KERC) ಹೊರಡಿಸಿದ ಆದೇಶದ ಪ್ರಕಾರ, ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಹೊಸ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
ಕೆಇಆರ್ಸಿ ಪ್ರಕಾರ, ಈ ದರ ಹೆಚ್ಚಳ ವಿದ್ಯುತ್ ಪ್ರಸರಣ, ಎಸ್ಕಾಂಗಳ ಸಿಬ್ಬಂದಿಗಳ ಪಿಂಚಣಿ ಮತ್ತು ಉಚಿತ ವಿದ್ಯುತ್ ಯೋಜನೆಗಳ ವೆಚ್ಚ ಭರಿಸಲು ಮಾಡಲಾಗಿದೆ.