ಎಲಾನ್ ಮಸ್ಕ್, (Elon Musk) ಈಗಾಗಲೇ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಇತ್ತೀಚಿಗೆ 400 ಶತಕೋಟಿ ಡಾಲರ್ ಸಂಪತ್ತನ್ನು ಮೀರಿಸಿಕೊಂಡಿದ್ದಾರೆ. ಇದು 21ನೇ ಶತಮಾನದ ಐತಿಹಾಸಿಕ ಸಾಧನೆ ಆಗಿದ್ದು, ಮಸ್ಕ್ ಅವರು ಈ ಮಟ್ಟದ ಸಂಪತ್ತು ಹೊಂದಿದ ಮೊದಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯ ಷೇರುಗಳ ಮಾರಾಟದಿಂದ, ಕಳೆದ ಕೆಲವು ತಿಂಗಳಲ್ಲಿ 50 ಶತಕೋಟಿ ಡಾಲರ್ ಲಾಭವನ್ನು ಗಳಿಸಿದರು. ಈ ಸಂದರ್ಭದಲ್ಲಿ, ಅವರ ಒಟ್ಟು ಆಸ್ತಿ 439.2 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ.
ಮಸ್ಕ್ ಅವರು ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಮುಂದಿನ ಆಡಳಿತದಲ್ಲಿ ಮಸ್ಕ್ ಅವರಿಗೆ ಪ್ರಮುಖ ಸ್ಥಾನ ದೊರೆಯಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.
ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯವು 65% ಏರಿಕೆಯಾಗಿ, ಚುನಾವಣಾ ಪ್ರಭಾವದಿಂದ ನಿರಂತರವಾಗಿ ಬೆಳೆದಿದೆ. ಸ್ಪೇಸ್ ಎಕ್ಸ್ ನ ಷೇರು ಖರೀದಿಗೆ ಹೂಡಿಕೆದಾರರು ಮುಂದಾಗಿದ್ದು, ಸಂಸ್ಥೆಯನ್ನು ವಿಶ್ವದ ಅತ್ಯಂತ ಮೌಲ್ಯಯುತ ಖಾಸಗಿ ಸಂಸ್ಥೆಗಾಗಿಸಿದೆ. ಅದರ ಜೊತೆಗೆ, ಮಸ್ಕ್ ಅವರ ಎಐ ಸ್ಟಾರ್ಟಪ್ xAI ಕೂಡ ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿದೆ.
ಇವುಗಳೊಂದಿಗೆ, ಎಲಾನ್ ಮಸ್ಕ್ ಅವರ ಆರ್ಥಿಕ ಯಶಸ್ಸು ಮತ್ತು ತಂತ್ರಜ್ಞಾನ ಪ್ರಗತಿ ಇಡೀ ವಿಶ್ವದ ಗಮನ ಸೆಳೆದಿದೆ.