
2019ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ‘ಲೂಸಿಫರ್’ ಸೀಕ್ವೆಲ್ ‘ಎಲ್2, Empuraan ಮಾರ್ಚ್ 27ರಂದು ತೆರೆಕಂಡಿದೆ. ಸೌತ್ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ಈ ಮಹತ್ವಾಕಾಂಕ್ಷಿ ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಪ್ರಾರಂಭಿಕ ವಿಮರ್ಶೆಗಳ ಪ್ರಕಾರ, ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ.
ಸಿನಿಮಾ ಟ್ರ್ಯಾಕರ್ Sacknilk ಪ್ರಕಾರ, ‘ಎಂಪುರಾನ್’ ಭಾರತದೊಳಗೆ ಮೊದಲ ದಿನ 22 ಕೋಟಿ ರೂ. (Net Collection) ಗಳಿಸಿದೆ. ಈ ಪೈಕಿ
- ಮಲಯಾಳಂ: ₹19.45 ಕೋಟಿ
- ತೆಲುಗು: ₹1.2 ಕೋಟಿ
- ತಮಿಳು: ₹80 ಲಕ್ಷ
- ಕನ್ನಡ: ₹5 ಲಕ್ಷ
- ಹಿಂದಿ: ₹50 ಲಕ್ಷ
‘Empuraan’ ಮೊದಲ ದಿನವೇ ಮಲಯಾಳಂ ಚಿತ್ರರಂಗದ ಅತಿದೊಡ್ಡ ಓಪನಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ‘ಮರಕ್ಕರ್’ ಮೊದಲ ದಿನ 20 ಕೋಟಿ ರೂ. ಗಳಿಸಿ ದಾಖಲೆ ಬರೆದಿತ್ತು. ಆದರೆ ‘ಎಂಪುರಾನ್’ ಚಿತ್ರದ ಪ್ರಾರಂಭದ ಗ್ಲೋಬಲ್ ಕಲೆಕ್ಷನ್ 50 ಕೋಟಿ ರೂ. ದಾಟಿದೆ!
ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗೆ ಟೋವಿನೋ ಥಾಮಸ್, ಮಂಜು ವಾರಿಯರ್, ಅಭಿಮನ್ಯು ಸಿಂಗ್, ಸೂರಜ್ ವೆಂಜರಮೂಡು, ಸಾನಿಯಾ ಅಯ್ಯಪ್ಪನ್ ಮತ್ತು ನಿರ್ದೇಶಕ ಪೃಥ್ವಿರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
- ಕಥೆ: ಮುರಳಿ ಗೋಪಿ
- ಸಂಗೀತ: ದೀಪಕ್ ದೇವ್
- ಚಿತ್ರಗ್ರಹಣ: ಸುಜಿತ್ ವಾಸುದೇವ್
- ನಿರ್ಮಾಪಕರು: ಮೋಹನ್ ಲಾಲ್ ಅವರ ಆಶೀರ್ವಾದ್ ಸಿನಿಮಾಸ್, ಶ್ರೀ ಗೋಕುಲಂ ಮೂವೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್
‘ಎಂಪುರಾನ್’ Housefull ಶೋಗಳೊಂದಿಗೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಹೊಸ ದಾಖಲೆಗಳತ್ತ ಸಾಗಲಿದೆ!