
ಆಟೋಮೊಬೈಲ್ ಕ್ಷೇತ್ರದಲ್ಲಿ ಹೈಬ್ರಿಡ್ ವಾಹನಗಳ ಪ್ರಭಾವ ಹೆಚ್ಚಾಗುತ್ತಿದೆ. ಹಲವಾರು ಕಂಪನಿಗಳು ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುತ್ತಿವೆ. ಈ ಹಾದಿಯಲ್ಲಿ ಈಗ ಐಷಾರಾಮಿ ಕಾರು ತಯಾರಕ ಔಡಿಯೂ (Audi A5) ಹೊಸ A5 PHEV ಮಾದರಿಯೊಂದಿಗೆ ಕಾಲಿಟ್ಟಿದೆ.
110 ಕಿ.ಮೀ.ವರೆಗೆ ವಿದ್ಯುತ್ ಚಾಲನೆ: ಹೊಸ PHEV ಪವರ್‌ಟ್ರೇನ್ ಹೊಂದಿರುವ ಈ ಕಾರು, ಪೆಟ್ರೋಲ್ ಬಳಿಸದೆ 110 ಕಿ.ಮೀ.ವರೆಗೆ ಚಾಲನೆ ನೀಡಬಹುದು. ಇದರಿಂದ ಇಂಧನದ ಬಳಕೆ ಕಡಿಮೆಯಾಗುವ ಜೊತೆಗೆ ನಿರ್ವಹಣಾ ವೆಚ್ಚವೂ ಕಡಿಮೆಯಾಗುತ್ತದೆ.
ಶಕ್ತಿಶಾಲಿ ಎಂಜಿನ್ ಮತ್ತು ಬ್ಯಾಟರಿ ತಂತ್ರಜ್ಞಾನ: ಈ ಕಾರಿನಲ್ಲಿ 2.0-ಲೀಟರ್ 4-ಸಿಲಿಂಡರ್ ಟರ್ಬೋ-ಪೆಟ್ರೋಲ್ ಎಂಜಿನ್ ಮತ್ತು 142 ಎಚ್ಪಿ ವಿದ್ಯುತ್ ಮೋಟಾರ್ ಸೇರಿಕೊಂಡು 300 ಬಿಎಚ್ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಒದಗಿಸುತ್ತವೆ. ಕ್ವಾಟ್ರೋ ಆಲ್-ವೀಲ್ ಡ್ರೈವ್ ಹೊಂದಿರುವ ಈ ಕಾರು 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಮೂಲಕ ಚಲಿಸುತ್ತದೆ.
ಹೆಚ್ಚಿನ ಬ್ಯಾಟರಿ ಸಾಮರ್ಥ್ಯ, ತ್ವರಿತ ಚಾರ್ಜಿಂಗ್: ಈ ಮಾದರಿಯು 25.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 11 kW AC ಫಾಸ್ಟ್ ಚಾರ್ಜಿಂಗ್ ಗೆ ಸಹಾಯ ಮಾಡುತ್ತದೆ. ಕೇವಲ 2.5 ಗಂಟೆಗಳಲ್ಲಿ ಪೂರ್ಣ ಚಾರ್ಜ್ ಮಾಡಬಹುದಾಗಿದೆ. ಈ ಹೊಸ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯ ಬೆಲೆ ಮತ್ತು ಹೆಚ್ಚಿನ ಫೀಚರ್‌ಗಳ ಮಾಹಿತಿ ಶೀಘ್ರದಲ್ಲೇ ಲಭ್ಯವಾಗಲಿದೆ. ಐಷಾರಾಮಿ ಹೈಬ್ರಿಡ್ ಕಾರುಗಳನ್ನು ಇಚ್ಛಿಸುವವರಿಗೆ ಇದು ಅತ್ಯುತ್ತಮ ಆಯ್ಕೆ!