ಟಿ20 ಕ್ರಿಕೆಟ್‌ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ದಕ್ಷಿಣ ಆಫ್ರಿಕಾ(South Africa) ಬೌಲರ್ ಗಳನ್ನು ಧೂಳಿಪಟ ಮಾಡಿದರು.
ಬಟ್ಲರ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ 83 ರನ್ ಗಳಿಸಿದರು. ನಂತರ ಸಾಲ್ಟ್ ಅದ್ಭುತ ಆಟ ತೋರಿದರು. 39 ಎಸೆತಗಳಲ್ಲಿ ಶತಕ ಪೂರೈಸಿ ಒಟ್ಟಾರೆ 60 ಎಸೆತಗಳಲ್ಲಿ 141 ರನ್ ಅಜೇಯರಾಗಿ ಉಳಿದರು. ಹ್ಯಾರಿ ಬ್ರೂಕ್ 41 ರನ್ ಗಳಿಸಿದರು.
ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 304 ರನ್ ಗಳಿಸಿ ಇತಿಹಾಸ ನಿರ್ಮಿಸಿತು. ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ 300ರ ಗಡಿ ದಾಟಿದ ಮೊದಲ ತಂಡ ಎಂಬ ವಿಶ್ವದಾಖಲೆ ಇಂಗ್ಲೆಂಡ್ ಹೆಸರಾಯಿತು.
ದಕ್ಷಿಣ ಆಫ್ರಿಕಾ 305 ರನ್ ಗುರಿಯನ್ನು ಎದುರಿಸಲು ವಿಫಲವಾಯಿತು. ನಾಯಕ ಐಡೆನ್ ಮಾರ್ಕ್ರಾಮ್ ಮಾತ್ರ 41 ರನ್ ಗಳಿಸಿದರು. ಉಳಿದ ಆಟಗಾರರು ವಿಫಲರಾಗಿದ್ದು, ದಕ್ಷಿಣ ಆಫ್ರಿಕಾ 158 ರನ್ ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ 146 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.







