ಮಧ್ಯಂತರ ಉಪವಾಸವು (Intermittent fasting) ಆಹಾರ ಕ್ಷೇತ್ರದಲ್ಲಿ ಇತ್ತೀಚೆಗೆ ಟ್ರೆಂಡಿಂಗ್ ಆಗಿದೆ. ಇದರ ಅರ್ಥ ಒಂದು ಹೊತ್ತು ಮಾತ್ರ ಆಹಾರ ಸೇವಿಸಿದ ನಂತರ ದಿನವೀಡಿ ಉಪವಾಸ ಮಾಡುತ್ತಾರೆ. ಇದರ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಮತ್ತು ಕೊಬ್ಬು ಕರಗಲು ಸಹಾಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ
ಮಧ್ಯಂತರ ಉಪವಾಸವು ಚಯಾಪಚಯವನ್ನು ಸುಧಾರಿಸಿ, ತೂಕವನ್ನು ಕಡಿಮೆ ಮಾಡಬಹುದು. ಆದರೆ ಇತ್ತೀಚೆಗೆ ನಡೆದ ಅಧ್ಯಯನವು ಹೇಳಿದಂತೆ, ಈ ವಿಧಾನವು ಕೂದಲಿನ ಬೆಳವಣಿಗೆಯ ಮೇಲೆ ಕೆಲವೆ ಸಮಸ್ಯೆಗಳನ್ನೂ ತರಬಹುದು ಎಂದು ಸಂಶೋಧನೆನೂ ಹೇಳಿದ್ದು, ಈ ಉಪವಾಸವು ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ಕೂದಲಿನ ಬೆಳವಣಿಗೆ ಮೇಲೆ ಪರಿಣಾಮ
ಮಧ್ಯಂತರ ಉಪವಾಸವು ಹಾರ್ಮೋನಲ್ ಬದಲಾವಣೆಗಳನ್ನು ಉಂಟುಮಾಡಿ, ಆಕ್ಸಿಡೇಟಿವ್ ಒತ್ತಡ ಹೆಚ್ಚಿಸಬಹುದು. ಇದರಿಂದ ಕೂದಲಿನ ಕಿರುಚೀಲಗಳಲ್ಲಿನ ಕೊಬ್ಬಿನಾಮ್ಲಗಳು ಸಂಗ್ರಹವಾಗುತ್ತವೆ, ಇದು ಕೂದಲಿನ ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ.
ಈ ಅಧ್ಯಯನವನ್ನು ಜರ್ನಲ್ ಸೆಲ್ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯ ಭಾಗವಾಗಿ, ಮಧ್ಯಂತರ ಉಪವಾಸಕ್ಕೆ ಒಳಗಾದ ಇಲಿಗಳಲ್ಲಿ ಕೂದಲಿನ ಬೆಳವಣಿಗೆಯು ಗಣನೀಯವಾಗಿ ನಿಧಾನವಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಮಾನವರ ಮೇಲೆ ನಡೆಸಿದ ಕ್ಲಿನಿಕಲ್ ಪ್ರಯೋಗಗಳಲ್ಲಿ ಈ ಪರಿಣಾಮವು ಸ್ವಲ್ಪ ಕಡಿಮೆಯಾಗಿದೆ ಎನ್ನುವುದು ತಿಳಿದುಬಂದಿದೆ.
“ಮಧ್ಯಂತರ ಉಪವಾಸವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತೆ. ಆದರೆ, ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ಬಿಡಲು ಅಗತ್ಯವಿಲ್ಲ. ಆದರೆ, ಈ ವಿಚಾರದಲ್ಲಿ ಸ್ವಲ್ಪ ತಿಳಿದುಕೊಳ್ಳುವುದು ಉತ್ತಮ.” – ಡಾ. ಬಿಂಗ್ ಜಾಂಗ್ (ಸ್ಟೆಮ್ ಸೆಲ್ ಬಯಾಲಜಿಸ್ಟ್, ವೆಸ್ಟ್ಲೇಕ್ ವಿಶ್ವವಿದ್ಯಾಲಯ, ಝೆಜಿಯಾಂಗ್, ಚೀನಾ) ಎಂದು ಹೇಳಿದ್ದಾರೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಆರೋಗ್ಯ ಮಾಹಿತಿಯು ಪ್ರಾದೇಶಿಕ ಮಾಹಿತಿಗಾಗಿ ಮಾತ್ರ. ಈ ಮಾಹಿತಿಯನ್ನು ಅನುಸರಿಸುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯುವುದು ಸೂಕ್ತ.