ಡೇವಿಡ್ ಕಪ್ (Davis Cup) ಕ್ವಾರ್ಟರ್ ಫೈನಲ್ ನಲ್ಲಿ ನೆದರ್ಲೆಂಡ್ಸ್ ತಂಡವು ಸ್ಪೇನ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಟೆನಿಸ್ ಅಂಗಳದ ದಿಗ್ಗಜ ರಾಫೆಲ್ ನಡಾಲ್ (Rafael Nadal) ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ನ ಬೊಟಿಕ್ ವ್ಯಾನ್ ಡಿ ಝಾಂಡ್ಸ್ಚುಲ್ಪ್ ಅವರನ್ನು ಎದುರಿಸಿದ ನಡಾಲ್ 6-4, 6-4 ಅಂತರದಿಂದ ಪರಾಜಯಗೊಂಡರು. ಈ ಸೋಲಿನೊಂದಿಗೆ 20 ವರ್ಷಗಳ ರಾಫೆಲ್ ನಡಾಲ್ ಅವರ ಟೆನಿಸ್ ವೃತ್ತಿ ಅಂತ್ಯವಾಯಿತು.
ನಡಾಲ್ ಅವರ ಸಾಧನೆಗಳು
- 1080 ಸಿಂಗಲ್ಸ್ ಜಯ
- 92 ಸಿಂಗಲ್ಸ್ ಪ್ರಶಸ್ತಿಗಳು
- 63 ಕ್ಲೇ ಕೋರ್ಟ್ ಪ್ರಶಸ್ತಿಗಳು
- 36 ಮಾಸ್ಟರ್ಸ್ 1000 ಪ್ರಶಸ್ತಿಗಳು
- 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳು
- 14 ಫ್ರೆಂಚ್ ಓಪನ್ (ರೋಲ್ಯಾಂಡ್ ಗ್ಯಾರೋಸ್) ಪ್ರಶಸ್ತಿಗಳು
- 2 ಒಲಿಂಪಿಕ್ ಚಿನ್ನದ ಪದಕಗಳು
ಕ್ಲೇ ಕೋರ್ಟ್ ಕಿಂಗ್
ಕ್ಲೇ ಕೋರ್ಟ್ ನಲ್ಲಿ 63 ಪ್ರಶಸ್ತಿಗಳು ಗೆದ್ದು, 14 ಬಾರಿ ಫ್ರೆಂಚ್ ಓಪನ್ನಲ್ಲಿ ಗೆದ್ದು, ‘ಕ್ಲೇ ಕೋರ್ಟ್ ಕಿಂಗ್’ ಎಂಬ ಹೆಸರನ್ನು ಪಡೆದಿದ್ದಾರೆ. ನೊವಾಕ್ ಜೊಕೊವಿಚ್ ನಂತರದ ದಾಖಲೆಯ ಆಟಗಾರ ನಡಾಲ್ 22 ಗ್ರ್ಯಾಂಡ್ ಸ್ಲಾಮ್ ಗೆಲುವುಗಳೊಂದಿಗೆ, ನೊವಾಕ್ ಜೊಕೊವಿಚ್ (24) ನಂತರ ಅತ್ಯಧಿಕ ಗ್ರ್ಯಾಂಡ್ ಸ್ಲಾಮ್ ಗೆದ್ದ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ಟೆನಿಸ್ ಲೋಕವನ್ನು ಅಳಿಸಲು ಮಾಡಿದ ಕೊನೆಯ ಪ್ರಯತ್ನವೂ ಸೋಲಿನಲ್ಲಿ ಕೊನೆಗೊಂಡು, ಕಣ್ಣೀರಿನೊಂದಿಗೆ ರಾಫೆಲ್ ನಡಾಲ್ ವಿದಾಯ ಹೇಳಿದ್ದಾರೆ.