back to top
26.3 C
Bengaluru
Friday, July 18, 2025
HomeBusinessBengaluru ಕಂಪನಿಗೆ America ದಿಂದ ಹಣಕಾಸು ಪಾವತಿ: ED Investigation

Bengaluru ಕಂಪನಿಗೆ America ದಿಂದ ಹಣಕಾಸು ಪಾವತಿ: ED Investigation

- Advertisement -
- Advertisement -

New Delhi: ಭಾರತ ವಿರೋಧಿ ಉದ್ಯಮಿ ಜಾರ್ಜ್ ಸೊರೋಸ್ (George Soros) ಬೆಂಬಲಿತ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (USAID)ಯಿಂದ 8 ಕೋಟಿ ರು. ಪಾವತಿಯಾಗಿರುವ ವಿಷಯ ಜಾರಿ ನಿರ್ದೇಶನಾಲಯ (ED) ತನಿಖೆಯಿಂದ ಬೆಳಕಿಗೆ ಬಂದಿದೆ.

ಸೊರೋಸ್ ಬೆಂಬಲಿತ ಎಎಸ್ಎಆರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಎಂಬ ಕಂಪನಿಯು 2022-23ರಲ್ಲಿ 8 ಕೋಟಿ ರು. ಪಡೆದಿರುವುದು ಪತ್ತೆಯಾಗಿದ್ದು, ಈ ಕಂಪನಿಯ ಹಣಕಾಸು ಉಗಮದ ಬಗ್ಗೆ ಇ.ಡಿ. ತನಿಖೆ ನಡೆಸುತ್ತಿದೆ.

ಇ.ಡಿ. ಕಳೆದ ಕೆಲ ತಿಂಗಳಿನಿಂದ ಸೊರೋಸ್ ಎಕನಾಮಿಕ್ ಡೆವಲಪ್ಮೆಂಟ್ ಫಂಡ್ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಮಾರ್ಚ್ ತಿಂಗಳಲ್ಲಿ ಬೆಂಗಳೂರು ಮೂಲದ ಮೂರು ಕಂಪನಿಗಳಾದ ಎಎಸ್ಎಆರ್, ರೂಟ್ ಬ್ರಿಡ್ಜ್ ಸರ್ವೀಸಸ್, ಮತ್ತು ರೂಟ್ ಬ್ರಿಡ್ಜ್ ಅಕಾಡೆಮಿಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದೆ. 2022ರಿಂದ 2024ರ ಅವಧಿಯಲ್ಲಿ ಈ ಕಂಪನಿಗಳಿಗೆ ವಿದೇಶದಿಂದ 25 ಕೋಟಿ ರೂ. ಶಂಕಾಸ್ಪದ ಪಾವತಿ ನಡೆದಿರುವುದು ದಾಖಲಾಗಿದೆ.

ಅಮೆರಿಕದ ಶತಕೋಟ್ಯಾಧಿಪತಿ ಹಾಗೂ ಭಾರತ ವಿರೋಧಿ ನಿಲುವಿನ ಜಾರ್ಜ್ ಸೊರೋಸ್ ಸ್ಥಾಪಿಸಿದ ಓಪನ್ ಸೊಸೈಟಿ ಫೌಂಡೇಷನ್ ಬೆಂಗಳೂರು ಕಚೇರಿಗಳ ಮೇಲೆ ಮಾರ್ಚ್ ತಿಂಗಳಲ್ಲಿ ಇ.ಡಿ. ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಯ ಆರೋಪದ ಮೇರೆಗೆ ಈ ದಾಳಿ ನಡೆದಿದೆ.

ಫೌಂಡೇಷನ್ ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದ್ದು, ಕೆಲ ಫಲಾನುಭವಿಗಳು ಫೆಮಾ ನಿಯಮ ಉಲ್ಲಂಘಿಸಿ ಹಣ ದುರುಪಯೋಗ ಮಾಡಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ಸಮಯದಲ್ಲಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಓಪನ್ ಸೊಸೈಟಿ ಫೌಂಡೇಷನ್ ವಿಶ್ವಾದ್ಯಂತ ನ್ಯಾಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಭಾರತದಲ್ಲಿ 4 ಲಕ್ಷ ಡಾಲರ್‌ಗಿಂತ ಹೆಚ್ಚು ಹಣ ವೆಚ್ಚ ಮಾಡಿರುವುದಾಗಿ ಫೌಂಡೇಷನ್ ತಿಳಿಸಿತ್ತು. ಈ ಹಣ ದುರುಪಯೋಗವಾಗಿದೆ ಎಂಬ ಮಾಹಿತಿ ಆಧಾರದ ಮೇಲೆ ಇ.ಡಿ. ತನಿಖೆ ಮುಂದುವರಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page