ಈ ವರ್ಷದ 17ನೇ ಏಷ್ಯಾಕಪ್ (Asia Cup) ಸೆಪ್ಟೆಂಬರ್ 9ರಿಂದ ಆರಂಭವಾಗಿ 28ರಂದು ಫೈನಲ್‌ನೊಂದಿಗೆ ಮುಕ್ತಾಯವಾಗಲಿದೆ. ಹಿಂದಿನ ಬಾರಿ 6 ತಂಡಗಳು ಭಾಗವಹಿಸಿದ್ದರೆ, ಈ ಬಾರಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಓಮನ್, ಹಾಂಗ್ಕಾಂಗ್ ಮತ್ತು ಯುಎಇ ಸೇರಿ ಒಟ್ಟು 8 ತಂಡಗಳು ಸ್ಪರ್ಧಿಸಲಿವೆ. ಭಾರತ ಸೆಪ್ಟೆಂಬರ್ 10ರಂದು ಯುಎಇ ವಿರುದ್ಧ ಮೊದಲ ಪಂದ್ಯ, 14ರಂದು ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ಹಾಗೂ 19ರಂದು ಒಮಾನ್ ವಿರುದ್ಧ ಮೂರನೇ ಪಂದ್ಯ ಆಡಲಿದೆ.
ಟಿ20 ನಾಯಕ ಸೂರ್ಯಕುಮಾರ್ ಯಾದವ್ ಎರಡು ತಿಂಗಳ ಹಿಂದೆ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಈಗ ಅವರು ಚೇತರಿಸಿಕೊಂಡಿದ್ದರೂ ಪೂರ್ಣ ಫಿಟ್ ಆಗಿಲ್ಲ ಎನ್ನಲಾಗಿದೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ fitness ಪರೀಕ್ಷೆಗೊಳಗಾಗುತ್ತಿದ್ದಾರೆ.
ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ NCAಯಲ್ಲಿ ಎರಡು ದಿನ fitness ಪರೀಕ್ಷೆ ನಡೆಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ fitness ಟೆಸ್ಟ್ ಪೂರ್ಣಗೊಳಿಸಿ ದೇಶೀಯ ಪಂದ್ಯಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್ ಫಿಟ್ ಆದರೆ ಏಷ್ಯಾಕಪ್ ನಲ್ಲಿ ನಾಯಕತ್ವ ಮುಂದುವರಿಸಲಿದ್ದಾರೆ. ಉಪನಾಯಕತ್ವ ಅಕ್ಷರ್ ಪಟೇಲ್‌ನಿಂದ ಶುಭಮನ್ ಗಿಲ್‌ಗೆ ಹೋಗುವ ಸಾಧ್ಯತೆ ಇದೆ. ಮುಂದಿನ ಟಿ20 ವಿಶ್ವಕಪ್ ನಂತರ ಗಿಲ್ ನಾಯಕನಾಗುವ ಸಾಧ್ಯತೆ ಇದೆ.







