back to top
26.2 C
Bengaluru
Monday, November 10, 2025
HomeHealthಹಾರ್ಮೋನುಗಳ ಸಮತೋಲನಕ್ಕಾಗಿ Flax seeds

ಹಾರ್ಮೋನುಗಳ ಸಮತೋಲನಕ್ಕಾಗಿ Flax seeds

- Advertisement -
- Advertisement -

ಅಗಸೆ ಬೀಜಗಳ (flax seeds) ನಿಯಮಿತ ಸೇವನೆಯು ಮಹಿಳೆಯರಲ್ಲಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಋತುಚಕ್ರದ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಅಗಸೆ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುವುದರಿಂದ ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಕೂದಲು ಆರೋಗ್ಯಕರ ಮತ್ತು ಬಲವಾಗಿ ಬೆಳೆಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾನಾ ರೀತಿಯ ಹರಸಾಹಸಗಳನ್ನು ಮಾಡುತ್ತಿದ್ದಾರೆ. ವಿವಿಧ ರೀತಿಯ ಡ್ರೈ ಫ್ರೂಟ್ಸ್ ಜೊತೆಗೆ ಬೀಜಗಳನ್ನು ಪ್ರತಿನಿತ್ಯ ಸೇವನೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಇವು ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಅನುಕೂಲ ಮಾಡಿಕೊಡುತ್ತದೆ. ಇದರ ಜೊತೆಗೆ ನೀವು ಅಗಸೆ ಬೀಜಗಳನ್ನು ಸೇವನೆ ಮಾಡುತ್ತಿದ್ದರೆ ನಿಮಗಿಂತ ಆರೋಗ್ಯವಂತರಿರುವುದಿಲ್ಲ. ಇವು ನೋಡುವುದಕ್ಕೆ ಚಿಕ್ಕದಾಗಿದ್ದರೂ ಕೂಡ, ಅನೇಕ ರೀತಿಯ ಪೋಷಕಾಂಶಗಳಿಂದ ತುಂಬಿದೆ.

ಅಗಸೆ ಬೀಜಗಳ ಪ್ರಯೋಜನಗಳು

  • ಮಲಬದ್ಧತೆ ನಿವಾರಣೆ: ಅಗಸೆ ಬೀಜಗಳಲ್ಲಿ ಇದ್ದ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
  • ಮಧುಮೇಹ ನಿಯಂತ್ರಣ: ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು, ಇದರಿಂದ ಮಧುಮೇಹಿಗಳಿಗೆ ಉಪಯುಕ್ತವಾಗಿದೆ.
  • ಕ್ಯಾನ್ಸರ್ ನಿಗ್ರಹ: ಲಿಗ್ನಾನ್ ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ಸ್ತನ, ಪ್ರಾಸ್ಟೇಟ್, ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.
  • ತೂಕ ನ್ಯೂನತೆಯ ಲಾಭ: ಫೈಬರ್ ಅಂಶವು ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ಹೆಚ್ಚು ತಿನ್ನುವುದನ್ನು ತಡೆಯುತ್ತದೆ, ಇದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಚರ್ಮ ಹಾಗೂ ಕೂದಲು ಆರೋಗ್ಯ: ಒಮೆಗಾ -3 ಕೊಬ್ಬಿನಾಮ್ಲಗಳು ಚರ್ಮವನ್ನು ತೇವಾಂಶದಿಂದ ಕೂಡಿಸುತ್ತದೆ ಮತ್ತು ಕೂದಲನ್ನು ಬಲಪಡಿಸುತ್ತದೆ.
  • ಹಾರ್ಮೋನುಗಳ ಸಮತೋಲನ: ನಿರಂತರ ಸೇವನೆಯಿಂದ ಮಹಿಳೆಯರಲ್ಲಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸೂಚನೆ: ಈ ಮಾಹಿತಿಗಳು ಸೂಚನೆಗಾಗಿ ಮಾತ್ರ. ಯಾವುದೇ ಸಂಶಯಗಳು ಇದ್ದರೆ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page