Bengaluru: ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಕಾಡಿನಿಂದ ಹೊರಗೆ ಹಾಕಬಾರದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ವಿಧಾನಸೌಧದಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಸಮಿತಿಯ ಸಭೆಯಲ್ಲಿ (State Level Vigilance Committee for Scheduled Castes and Tribes) ಈ ನಿರ್ದೇಶನ ನೀಡಲಾಯಿತು.
ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕು ಪತ್ರಗಳನ್ನು ಸಮರ್ಪಕವಾಗಿ ವಿತರಣಾ ಮಾಡಬೇಕು ಎಂದು ಸಿಎಂ ಹೇಳಿದರು. ಕಾನೂನು ಪಾಲನೆಗೆ ಸಂಬಂಧಿಸಿದ ಜಿಲ್ಲಾವಾರು ಅಂಕಿ-ಅಂಶಗಳನ್ನು ಮುಂದಿನ ಸಭೆಯಲ್ಲಿ ಪ್ರಸ್ತುತಪಡಿಸಲು ಸೂಚಿಸಿದರು.
ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳಲ್ಲಿ ಆರೋಪಪಟ್ಟಿ ದಾಖಲಿಸುವಂತೆ ಸಿಎಂ ಸೂಚಿಸಿದರು. ನ್ಯಾಯಾಲಯದ ತಡೆಯಾಜ್ಞೆಗಳ ಕುರಿತಂತೆ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ತಡೆಯಾಜ್ಞೆ ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದರು.
ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇಕಡಾ 3ಕ್ಕಿಂತ ಹೆಚ್ಚಾಗಿಲ್ಲ ಎಂಬ ಕಾರಣಕ್ಕಾಗಿ, ಡಿಸಿಎಆರ್ಇ ಸೆಲ್‌ಗಳಿಗೆ ಪೊಲೀಸ್ ಠಾಣೆಯ ಶಕ್ತಿಯನ್ನು ನೀಡಲಾಗಿದೆ.
ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಮಹಿಳೆಯರ ಅಹೋರಾತ್ರಿ ಧರಣಿಯ ಕುರಿತು ಸಿಎಂ ಚರ್ಚಿಸಿದರು. ದೇವದಾಸಿ ಮಹಿಳೆಯರ ಪುನರ್ವಸತಿ ಕಲ್ಪಿಸಲು, ಅವರ ಸ್ಥಿತಿ ಗತಿಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಬೇಕಾಗಿದೆ ಎಂದು ಸೂಚಿಸಿದರು.
ಸಭೆಯಲ್ಲಿ ಸಚಿವರು, ಶಾಸಕರು, ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.