
Guwahati: ರಾಜಕೀಯ ವಲಯದಲ್ಲಿ ಆಘಾತಕಾರಿ ಘಟನೆಗಳು ಒಂದರ ನಂತರ ಒಂದರಂತೆ ನಡೆಯುತ್ತಿವೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ BJP ನಾಯಕನ ಹತ್ಯೆ, ಪಂಜಾಬ್ ಮತ್ತು Chhattisgarh ದಲ್ಲಿ ರಾಜಕೀಯ ನಾಯಕರ ಸಾವಿನ ಪ್ರಕರಣಗಳು ಸುದ್ದಿಯಲ್ಲಿದ್ದವು.
ಇದೀಗ ಮತ್ತೊಂದು ದುಃಖದ ಸುದ್ದಿ ಬಂದಿದೆ – ಅಸ್ಸಾಂನ ಮಾಜಿ ಗೃಹ ಸಚಿವ ದಿವಂಗತ ಭೃಗು ಕುಮಾರ್ ಫುಕನ್ (former Assam Home Minister late Bhrigu Kumar Phukan) ಅವರ ಏಕೈಕ ಪುತ್ರಿ ಉಪಾಸಾ ಫುಕನ್ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ಬೆಳಿಗ್ಗೆ 7:55 ಕ್ಕೆ, ಉಪಾಸಾ ಗುವಾಹಟಿಯ ಘರ್ಗುಲ್ಲಿ ಪ್ರದೇಶದಲ್ಲಿರುವ ತನ್ನ ಮನೆಯ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾರಂಭದಲ್ಲಿ ಇದನ್ನು ಅಪಘಾತ ಎಂದು ಶಂಕಿಸಲಾಗಿದ್ದರೂ, ಇದೀಗ ಪೊಲೀಸರು ಆತ್ಮಹತ್ಯೆ ಸಾಧ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಉಪಾಸಾ ಫುಕನ್ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಈ ಸಾವಿನ ಹಿಂದೆ ಇರುವ ನಿಖರವಾದ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಭೃಗು ಕುಮಾರ್ ಫುಕನ್ ಅಸ್ಸಾಂ ಚಳವಳಿಯ ಪ್ರಮುಖ ನಾಯಕರಾಗಿದ್ದು, ಅಸ್ಸೋಮ್ ಗಣ ಪರಿಷತ್ (AGP) ಪಕ್ಷದ ನಾಯಕನಾಗಿ ಸತತ ಮೂರು ಅವಧಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಈ ಘಟನೆ ರಾಜಕೀಯ ಮತ್ತು ಸ್ಥಳೀಯ ವಲಯದಲ್ಲಿ ಆತಂಕ ಹುಟ್ಟಿಸಿದೆ. ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.