
ಭಾರತದ ಹೆಸರಾಂತ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ಹೊಸ ವಿಚಾರಗಳು, ಜೀವನ ಪಾಠ, ಹಾಸ್ಯ ಮತ್ತು ಸಾಧಕರ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಪ್ರತಿ ಭಾನುವಾರ ಭಾರತದ ಅಪ್ರತಿಮ ಪ್ರವಾಸಿ ತಾಣಗಳ ಬಗ್ಗೆ ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಈ ಬಾರಿ (ಮಾರ್ಚ್ 30), ಅವರು ಭಾರತದ ಮೊದಲ ಕಾಫಿ ತೋಟ ತಾಣದ ಬಗ್ಗೆ ತಿಳಿಸಿದರು. 1670ರಲ್ಲಿ ಬಾಬಾ ಬುಡಾನ್ ಯೆಮೆನ್ನಿಂದ ಕಾಫಿ ಬೀಜಗಳನ್ನು ತಂದು ಕರ್ನಾಟಕದ ಚಿಕ್ಕಮಗಳೂರಿನ ಹಸಿರು ಬೆಟ್ಟಗಳಲ್ಲಿ ಬಿತ್ತಿದರು. ಇದು ಭಾರತದ ಕಾಫಿ ಬೆಳೆಗಾರಿಕೆಯ ಉಗಮಕೇಂದ್ರವಾಯಿತು.
ಆನಂದ್ ಮಹೀಂದ್ರಾ ತಮ್ಮ ಎಕ್ಸ್ (Twitter) ಖಾತೆಯಲ್ಲಿ ಚಿಕ್ಕಮಗಳೂರಿನ ಈ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದು, “ಚಿಕ್ಕಮಗಳೂರು, ಕರ್ನಾಟಕ; 1670ರಲ್ಲಿ ಬಾಬಾ ಬುಡಾನ್ ಅವರು ಯೆಮೆನ್ನಿಂದ ಕಾಫಿ ಬೀಜಗಳನ್ನು ತಂದು ಇಲ್ಲಿ ನೆಟ್ಟರು” ಎಂಬ ಶೀರ್ಷಿಕೆ ನೀಡಿದರು.
ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿ, 1.7 ಲಕ್ಷ ವೀಕ್ಷಣೆಗಳನ್ನು ಹಾಗೂ ಅನೇಕ ಕಾಮೆಂಟ್ಸ್ ಗಳನ್ನು ಪಡೆದಿದೆ. ಕೆಲವು ಬಳಕೆದಾರರು ಚಿಕ್ಕಮಗಳೂರಿನ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇತರರು ಕಾಫಿ ಉದ್ಯಮದಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಕೇವಲ ಕಾಫಿ ತೋಟಗಳಷ್ಟೇ ಅಲ್ಲ, ಸುಂದರ ಬೆಟ್ಟಗಳು, ಜಲಪಾತಗಳು ಮತ್ತು ನದಿಗಳಿಂದ ಕೂಡಿದ ಅತ್ತಿಯಂತೆ ಆಕರ್ಷಕ ಪ್ರವಾಸಿ ತಾಣವಾಗಿದೆ!