
Colombo: ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (76) ಅವರನ್ನು ಸರ್ಕಾರಿ ಹಣ ದುರುಪಯೋಗದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 2023ರಲ್ಲಿ ಪತ್ನಿಯ ಘಟಿಕೋತ್ಸವ ಸಮಾರಂಭಕ್ಕಾಗಿ ಇಂಗ್ಲೆಂಡ್ಗೆ ತೆರಳಿದಾಗ ಸರ್ಕಾರಿ ಹಣ ಬಳಸಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲೆ ಇದೆ. ಅಮೆರಿಕದ ಅಧಿಕೃತ ಕಾರ್ಯಕ್ರಮ ಮುಗಿಸಿ ಖಾಸಗಿ ಕಾರ್ಯಕ್ರಮಕ್ಕಾಗಿ ಅವರು ಇಂಗ್ಲೆಂಡ್ಗೆ ಹೋಗಿದ್ದರು. ಆದರೆ ಈ ಖಾಸಗಿ ಪ್ರವಾಸಕ್ಕೂ ಸರ್ಕಾರಿ ಖಜಾನೆಯಿಂದ ಹಣ ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ವಿಕ್ರಮಸಿಂಘೆ
- ಗೊಟಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸಿದ ಬಳಿಕ ಜುಲೈ 2022ರಲ್ಲಿ ವಿಕ್ರಮಸಿಂಘೆ ಮಧ್ಯಂತರ ಅಧ್ಯಕ್ಷರಾದರು.
- 2022ರ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಿದ ನಾಯಕನಾಗಿ ಹೆಸರು ಮಾಡಿದರು.
- ಸೆಪ್ಟೆಂಬರ್ 2024ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಅನುರ ಕುಮಾರ ದಿಸಾನಾಯಕೆ ವಿರುದ್ಧ ಸೋತರು.
- ವಿಕ್ರಮಸಿಂಘೆ ಅವರು ಆರು ಬಾರಿ ಪ್ರಧಾನಿಯಾಗಿದ್ದರು.
ಅಮೆರಿಕ ಸುಂಕ ಘೋಷಣೆ
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2025 ಜುಲೈ 10ರಂದು ಹೊಸ ಸುಂಕಗಳನ್ನು ಘೋಷಿಸಿದರು.
- ಶ್ರೀಲಂಕಾ, ಅಲ್ಜೀರಿಯಾ, ಇರಾಕ್, ಲಿಬಿಯಾ, ಫಿಲಿಪ್ಪಿನ್ಸ್, ಮೊಲ್ಡೊವಾ ಮತ್ತು ಬ್ರೂನಿ ದೇಶಗಳಿಂದ ಬರುವ ವಸ್ತುಗಳ ಮೇಲೆ ಸುಂಕ ಹೆಚ್ಚಳ ಜಾರಿಯಾಗಿದೆ.
- ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಅಮೆರಿಕ ಶೇ.30ರಷ್ಟು ಸುಂಕ ವಿಧಿಸಿದೆ.
ಮೊಲ್ಡೊವಾ ದೇಶದಿಂದ ಬರುವ ವಸ್ತುಗಳಿಗೆ ಶೇ.25ರಷ್ಟು ಸುಂಕ ವಿಧಿಸಲಾಗುವುದು.