back to top
26.8 C
Bengaluru
Friday, August 1, 2025
HomeKarnatakaಇನ್ಮುಂದೆ ವಸತಿ ಶಾಲಾ-ಕಾಲೇಜುಗಳಿಗೂ ಉಚಿತ ವಿದ್ಯುತ್!

ಇನ್ಮುಂದೆ ವಸತಿ ಶಾಲಾ-ಕಾಲೇಜುಗಳಿಗೂ ಉಚಿತ ವಿದ್ಯುತ್!

- Advertisement -
- Advertisement -

Bengaluru: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ (Free electricity) ಪೂರೈಸಲು ಸಮಾಜ ಕಲ್ಯಾಣ ಇಲಾಖೆ (Social Welfare Department) ಆದೇಶ ಹೊರಡಿಸಿದೆ.

ಈ 821 ವಸತಿ ಶಾಲೆ

  • ಪರಿಶಿಷ್ಟ ಜಾತಿಯ 503 ವಸತಿ ಶಾಲೆಗಳು
  • ಪರಿಶಿಷ್ಟ ಪಂಗಡದ 144 ವಸತಿ ಶಾಲೆಗಳು
  • ಹಿಂದುಳಿದ ವರ್ಗದ 174 ವಸತಿ ಶಾಲೆಗಳಿವೆ.

ಈ ಎಲ್ಲಾ ಸಂಸ್ಥೆಗಳಿಗೆ 36 ಕೋಟಿ ರು. ವೆಚ್ಚದಲ್ಲಿ ಉಚಿತ ವಿದ್ಯುತ್ ಪೂರೈಸಲಾಗುತ್ತದೆ.

  • 23 ಕೋಟಿ ರು. SC-ST ಶಾಲೆಗಳಿಗೆ
  • 6 ಕೋಟಿ ರು. ಇತರೆ ಶಾಲೆಗಳಿಗೆ
  • 7 ಕೋಟಿ ರು. ಹಿಂದುಳಿದ ವರ್ಗದ ಶಾಲೆಗಳಿಗೆ ಹೊಂದಿಸಲಾಗಿದೆ.

SC-ST ಶಾಲೆಗಳ ವಿದ್ಯುತ್ ಬಿಲ್ SCST/ಟಿಎಸ್ಪಿ ಯೋಜನೆ ಅಡಿ ಭರಿಸಲಾಗುತ್ತದೆ. ಹಿಂದುಳಿದ ವರ್ಗದ ವಿದ್ಯುತ್ ಬಿಲ್ ತ್ರೈಮಾಸಿಕವಾಗಿ ಇಂಧನ ಇಲಾಖೆಗೆ ಮರುಪಾವತಿಸಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ, ವಿದ್ಯುತ್ ಬಳಕೆಯನ್ನು ಮಿತವಾಗಿಯೂ ಅಗತ್ಯಕ್ಕೆ ತಕ್ಕಂತೆ ಮಾತ್ರ ಮಾಡಬೇಕು ಎಂದು ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್, ಕೆಲವು ರಾಜ್ಯಗಳು ಸಾಲ ಮಾಡಿ ಉಚಿತ ವಿದ್ಯುತ್ ಪೂರೈಸುತ್ತಿವೆ ಎಂದು ಎಚ್ಚರಿಸಿದ್ದಾರೆ. “ವಿದ್ಯುತ್ ತಯಾರಿಸಲು ಹಣ ಬೇಕಾಗುತ್ತದೆ. ಸಾಲದ ಮೇಲೆ ಉಚಿತ ವಿದ್ಯುತ್ ನೀಡಿದರೆ ರಾಜ್ಯ ಸರ್ಕಾರಗಳು ಭಾರಿ ಸಾಲದ ಬಲೆಗೆ ಸಿಲುಕುತ್ತವೆ” ಎಂದು ಅವರು ಹೇಳಿದ್ದಾರೆ. ಈ ಎಚ್ಚರಿಕೆ ಪಂಜಾಬ್ ರಾಜ್ಯಕ್ಕೆ ನೀಡಿದ್ದರೂ, ಕರ್ನಾಟಕದ ಉಚಿತ ವಿದ್ಯುತ್ ಯೋಜನೆಗೂ ಇದು ಅನ್ವಯವಾಗುತ್ತದೆ.

ರಾಜ್ಯಗಳು ಜನಪ್ರಿಯ ಯೋಜನೆಗಳ ಹೆಸರಿನಲ್ಲಿ ಸಾಲ ಮಾಡುತ್ತಾ ಮುಂದಿನ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಾರದು ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page