
ಬೆಂಗಳೂರು ಆರ್.ವಿ. ರಸ್ತೆ–ಬೊಮ್ಮಸಂದ್ರ ಹಳದಿ ಮೆಟ್ರೋ (Yellow Metro) ಮಾರ್ಗ ಈಗಾಗಲೇ ಚಾಲನೆಗೊಂಡಿದೆ. ಇದು ಎಲೆಕ್ಟ್ರಾನಿಕ್ ಸಿಟಿಯನ್ನು ನಗರಕ್ಕೆ ಸಂಪರ್ಕಿಸುತ್ತಿದೆ.
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಅಥಾರಿಟಿ (ELCITA) ಉಚಿತ ಫೀಡರ್ ಬಸ್ (feeder bus) ಸೇವೆ ಆರಂಭಿಸಿದೆ. ಇದರ ಬಗ್ಗೆ ಸಂಸ್ಥೆ ತನ್ನ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.
- ಯಾವ ಮಾರ್ಗಗಳಲ್ಲಿ ಬಸ್ ಸಂಚಾರ?
- EC1 (ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣ)
- EC2 (ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ)
ಇವುಗಳಿಂದ ಇನ್ಫೋಸಿಸ್ ಹಾಗೂ ಇತರೆ ಕಚೇರಿ ಕ್ಯಾಂಪಸ್‌ಗಳಿಗೆ ಬಸ್ ಸಂಚಾರ ಸಿಗಲಿದೆ.
ಈ ಉಚಿತ ಫೀಡರ್ ಬಸ್ ಸೇವೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಭ್ಯವಿರುತ್ತದೆ.
ಈ ಬಸ್ ಸೇವೆಯಿಂದ ಮೆಟ್ರೋ ನಿಲ್ದಾಣದಿಂದ ಕಚೇರಿಗಳಿಗೆ ಹೋಗುವುದು ಸುಲಭವಾಗಲಿದೆ. ದಕ್ಷಿಣ ಬೆಂಗಳೂರು ಟೆಕ್ ಕಾರಿಡಾರ್‌ನಲ್ಲಿ ಸಾರ್ವಜನಿಕ ಸಾರಿಗೆ ಆಯ್ಕೆಗಳು ಹೆಚ್ಚಾಗಿವೆ.
ಇದೇ ಮಾರ್ಗದಲ್ಲಿ ಬಿಎಂಟಿಸಿ ಕೂಡ ಆಗಸ್ಟ್ 11ರಿಂದ ತನ್ನ ಫೀಡರ್ ಬಸ್ ಗಳನ್ನು ಚಾಲನೆಗಿಳಿಸಿದೆ.
- ಬೊಮ್ಮಸಂದ್ರ–ಹೆಬ್ಬಗೋಡಿ
- ಕೋನಪ್ಪನ ಅಗ್ರಹಾರ–ಎಲೆಕ್ಟ್ರಾನಿಕ್ ಸಿಟಿ
- ಮಾರ್ಗಗಳಲ್ಲಿ ಸಂಚಾರ ನಡೆಯುತ್ತಿದೆ.