Search
WhatsApp alerts

Home › Karnataka

Deepavali ಹಬ್ಬದ ಹಿನ್ನೆಲೆಯಲ್ಲಿ Bus Train Ticket ದುಬಾರಿ

administrator · Published

Deepavali Bus Train Ticket Fares Hike

ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ತಿಂಗಳಾಂತ್ಯ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಸಾಲು ಸಾಲು ರಜೆಗಳಿದ್ದು, ಬಸ್‌ ಟಿಕೆಟ್‌ ದರ (Ticket Price)  ದುಬಾರಿಯಾಗಿದೆ.

ರಾಜಧಾನಿ ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ 1,000 ರೂ. ಆಸುಪಾಸಿನಲ್ಲಿದ್ದ ಟಿಕೆಟ್‌ ದರವನ್ನು 1,500ರಿಂದ 2000 ರೂ.ವರೆಗೆ ಹೆಚ್ಚಿಸಲಾಗಿದೆ. ಹಬ್ಬಕ್ಕೆ ಮುನ್ನವೇ ಟಿಕೆಟ್‌ ದರ ಹೆಚ್ಚಳ ಮಾಡಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಡಿಮ್ಯಾಂಡ್‌ ಹೆಚ್ಚಿಸಲಾಗುತ್ತಿದೆ.

ರೈಲ್ವೆ ಇಲಾಖೆ ವಿಶೇಷ ರೈಲು ಓಡಾಟಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಅಲ್ಲೂ ಮುಂಗಡ ಟಿಕೆಟ್‌ ಸಿಗದ ಕಾರಣ ಬಸ್‌ ಸಂಸ್ಥೆಗಳು ಆನ್‌ಲೈನ್‌ನಲ್ಲೂ ದುಬಾರಿ ಆಗಿದೆ.

ಖಾಸಗಿ ಬಸ್‌ ಸಂಸ್ಥೆಗಳ ಅಕೃತ ವೆಬ್‌ಸೈಟ್‌ಗಳಲ್ಲಿ ನಮೂದಾಗಿರುವ ದರಕ್ಕೂ, ಬುಕ್ಕಿಂಗ್‌ ಮಾಡುವಾಗ ತೋರಿಸುವ ದರಕ್ಕೂ ವ್ಯತ್ಯಾಸವಿದೆ. ಉಡುಪಿಯಿಂದ ಬೆಂಗಳೂರಿಗೆ ವೆಬ್‌ಸೈಟ್‌ಗಳ ಮೇಲೆ 1,000 ರೂ. ದರ ನಮೂದಿಸಿದರೆ ಕ್ಲಿಕ್‌ ಮಾಡಿ ಸೀಟ್‌ ಆಯ್ಕೆ ಮಾಡಿದರೆ 400ರಿಂದ 700 ರೂ.ಗಳಷ್ಟು ಹೆಚ್ಚಳ ಕಂಡುಬರುತ್ತಿದೆ.

ದಿನಂಪ್ರತಿ ಓಡಾಡುವ ಬಸ್‌ಗಳ ಟಿಕೆಟ್‌ ಬಹುತೇಕ ಮುಂಗಡ ಬುಕ್ಕಿಂಗ್‌ ಆಗಿದೆ. ಬೇಡಿಕೆ ಗಮನಿಸಿಕೊಂಡು ಹೆಚ್ಚುವರಿ ಬಸ್‌ ಇಳಿಸುವುದಕ್ಕೆ ಖಾಸಗಿ ಬಸ್‌ ಮಾಲೀಕರು ಮುಂದಾಗಿದ್ದು, ಟಿಕೆಟ್‌ಗೆ ದುಪ್ಪಟ್ಟು ಹಣ ನಿಗದಿಯಾಗಿದೆ. ಲಗೇಜ್‌ಗಳಿಗೂ ಹೆಚ್ಚುವರಿ ಹಣ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

“ಕಾಂಟ್ರ್ಯಾಕ್ಟ್ ಕ್ಯಾರೇಜ್‌ ಬಸ್‌ಗಳಾಗಿರುವುದರಿಂದ ಟಿಕೆಟ್‌ಗಳಿಗೆ ನಿರ್ದಿಷ್ಟ ದರ ಎಂದು RTO ನಿಗದಿಪಡಿಸಿಲ್ಲ. ಆದರೆ ಬಸ್‌ ಟಿಕೆಟ್‌ಗೆ ಬೇಡಿಕೆ ಇದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಟಿಕೆಟ್‌ ದರ ಹೆಚ್ಚಿಸುವಂತೆಯೂ ಇಲ್ಲ.

ಪ್ರಯಾಣಿಕರಿಂದ ದೂರು ಬಂದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್‌.ಪಿ. ನಾಯಕ್‌ ತಿಳಿಸಿದ್ದಾರೆ.

“ಮುರ್ಡೇಶ್ವರ- ಮೈಸೂರು- ಬೆಂಗಳೂರು, ಕಾರವಾರ- ಬೆಂಗಳೂರು ರೈಲು ಓಡಾಟದ ಜತೆಗೆ ಹೆಚ್ಚುವರಿಯಾಗಿ ಒಂದು ರೈಲನ್ನು ಹಬ್ಬದ ಹಿನ್ನೆಲೆಯಲ್ಲಿಬಿಡಲಾಗಿದೆ. ಟಿಕೆಟ್‌ ಬುಕ್ಕಿಂಗ್‌ ಆರಂಭಗೊಂಡಿದ್ದು, ಅ.30ರಂದು ಬೆಂಗಳೂರಿನಿಂದ ಹೊರಡಲಿದೆ” ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page