ಪದೇ ಪದೇ ಆಕಳಿಕೆ ಬರುತ್ತಿದೆಯಾ? (Frequent yawning) ಇದು ಕೇವಲ ನಿದ್ರೆಯ ಕೊರತೆಯಿಂದಲೇ ಅಲ್ಲ, ಹೃದಯ ರೋಗದ ಮುನ್ಸೂಚನೆಯೂ ಆಗಿರಬಹುದು. ಕೆಲವೊಮ್ಮೆ ನರಗಳ ತೊಂದರೆ, ಹೃದಯ ಸಮಸ್ಯೆ ಅಥವಾ ಪಾರ್ಶ್ವವಾಯು ಕಾರಣವಾಗಬಹುದು.
ನಮಗೆ ನಿದ್ರೆ ಬಂದಾಗ ಆಕಳಿಕೆ ಬರುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ ಕಚೇರಿಯಲ್ಲಿ, ಮನೆಯಲ್ಲಿ ಅಥವಾ ಪ್ರಯಾಣಿಸುವಾಗಲೂ ಪದೇ ಪದೇ ಆಕಳಿಕೆ ಬರುತ್ತಿದೆಯೇ? ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ದೇಹ ಸುಸ್ತಾದಾಗ ಸಹಜವಾಗಿ ಆಕಳಿಕೆ ಬರಬಹುದು, ಆದರೆ ಸರಿಯಾಗಿ ವಿಶ್ರಾಂತಿ ತೆಗೆದುಕೊಂಡರೂ ಇದೇ ಸಮಸ್ಯೆ ಮುಂದುವರೆದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಪದೇ ಪದೇ ಆಕಳಿಕೆ ಕಾರಣಗಳು
- ನರಗಳ ತೊಂದರೆ
- ಹೃದಯ ಸಂಬಂಧಿತ ಸಮಸ್ಯೆಗಳು
- ಪಾರ್ಶ್ವವಾಯು ಮುನ್ಸೂಚನೆ
- ಕೊಲೆಸ್ಟ್ರಾಲ್ ಹೆಚ್ಚಳ (ಲಿಪಿಡ್ ಪ್ರೊಫೈಲ್ ಪರೀಕ್ಷೆಯಿಂದ ತಿಳಿಯಬಹುದು)
ಪದೇ ಪದೇ ಆಕಳಿಕೆ, ಎದೆ ನೋವು, ತಲೆತಿರುಗುವಿಕೆ ಅಥವಾ ಪ್ರಜ್ಞಾಹೀನತೆ ಮುಂತಾದ ಲಕ್ಷಣಗಳೊಂದಿಗೆ ಕಂಡುಬಂದರೆ, ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ 30-40 ವರ್ಷ ವಯಸ್ಸಿನವರಿಗೂ ಹೃದಯಾಘಾತದ ಅಪಾಯ ಹೆಚ್ಚುತ್ತಿದೆ.
ಆಕಳಿಕೆ ಸಮಸ್ಯೆ ನಿರಂತರವಾಗಿದ್ದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಿ.