back to top
26.3 C
Bengaluru
Friday, July 18, 2025
HomeBusinessಕೇಂದ್ರ ಸರ್ಕಾರದಿಂದ space ಕ್ಷೇತ್ರದಲ್ಲಿ startup ಗಳಿಗೆ Funding

ಕೇಂದ್ರ ಸರ್ಕಾರದಿಂದ space ಕ್ಷೇತ್ರದಲ್ಲಿ startup ಗಳಿಗೆ Funding

- Advertisement -
- Advertisement -

New Delhi: ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ (space sector) ಖಾಸಗಿ ಪಾಲುದಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ startup ಗಳಿಗೆ ಉತ್ತೇಜನ ನೀಡಲು 1,000 ಕೋಟಿ ರೂ.

ಬಂಡವಾಳ ನಿಧಿ ಸ್ಥಾಪಿಸುವ (venture capital fund) ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಇಂಥದ್ದೊಂದು ಬಂಡವಾಳ ನಿಧಿ ಸ್ಥಾಪಿಸುವುದಾಗಿ ಘೋಷಿಸಿದ್ದರು.

ಐದು ವರ್ಷಗಳವರೆಗೆ ಈ ನಿಧಿ ಇರಲಿದ್ದು, ಪ್ರತಿ ವರ್ಷ ಅಂದಾಜು 150ರಿಂದ 250 ಕೋಟಿ ರೂ. ಹಣ ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಮಾರು 40 startupಗಳಿಗೆ ಬಂಡವಾಳ ಒದಗಿಸಲಿದೆ ಎಂದು ಸಂಪುಟ ಸಭೆ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಾಗೂ ‘ಇಂಡಿಯನ್‌ ನ್ಯಾಷನಲ್‌ ಸ್ಪೇಸ್‌ ಪ್ರಮೋಷನ್‌ ಅಂಡ್‌ ಆಥರೈಸೇಷನ್‌ ಸೆಂಟರ್‌’ (IN-SPACE) ನೇತೃತ್ವದಲ್ಲಿ ನಿಧಿಯ ಹಂಚಿಕೆ ನಡೆಯಲಿದೆ.

startupಗಳಿಗೆ ಈ ನೆರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಗೇಮ್‌ ಚೇಂಜರ್‌ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದು ಸರಕಾರ ಹೇಳಿದೆ. ಉಪಗ್ರಹಗಳು ಹಾಗೂ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page