New Delhi: ನವದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಭವಿಷ್ಯದ ಅಪರಾಧ ಶೃಂಗಸಭೆ 2025 (Future Crime Summit 2025) ನಲ್ಲಿ ತಂತ್ರಜ್ಞಾನ ದುರ್ಬಳಕೆಯಿಂದಾಗುವ ಅಪರಾಧಗಳನ್ನು ನಿಯಂತ್ರಿಸಲು ಉಪಯುಕ್ತವಾದ ವಿಧಾನಗಳ ಬಗ್ಗೆ ಚರ್ಚೆ ನಡೆಯಿತು. ಈ ಸಮಾವೇಶವನ್ನು Future Crime Research Foundation (FCRF) ಆಯೋಜಿಸಿತ್ತು.
ಸಮಾವೇಶದಲ್ಲಿ ಭಾಗವಹಿಸಿದ ಗಣ್ಯರು
- ಸೈಬರ್ ಸೆಕ್ಯೂರಿಟಿ ಪರಿಣಿತರು
- ಕಾನೂನು ಜಾರಿ ಸಂಸ್ಥೆಗಳು
- ರಕ್ಷಣಾ ಸಿಬ್ಬಂದಿ
- ಸೈಬರ್ ವಕೀಲರು
- ಗುಪ್ತಚರ ಅಧಿಕಾರಿಗಳು
- ಉದ್ಯಮ ನಾಯಕರು ಮತ್ತು ಹಿರಿಯ ಎಕ್ಸಿಕ್ಯೂಟಿವ್ ಗಳು
ಈ ಸಮಾವೇಶದ ಮುಖ್ಯ ಆಕರ್ಷಣೆಯಾಗಿ ಪ್ರೋಡಿಸ್ಕವರ್ ಡಿಜಿಟಲ್ ಫೋರೆನ್ಸಿಕ್ಸ್ ನ “ಫ್ಲೆಕ್ಸ್ಕೀ” ಸಾಧನ ಹೆಸರು ಕೇಳಿಬಂದಿತು. ಇದು network ಆಧಾರಿತ ಲೈಸೆನ್ಸ್ ಮ್ಯಾನೇಜ್ಮೆಂಟ್ ಗೆ ಸಹಾಯ ಮಾಡುವ ಜೊತೆಗೆ, ಫೋರೆನ್ಸಿಕ್ ತನಿಖೆ ಮತ್ತು ಕಾರ್ಯಕ್ಷಮತೆಯನ್ನು ಬಲಪಡಿಸುತ್ತದೆ.
23 ವರ್ಷಗಳ ಅನುಭವದ ಪ್ರೋಡಿಸ್ಕವರ್ ಸಂಸ್ಥೆ, ಡಿಜಿಟಲ್ ಫೋರೆನ್ಸಿಕ್ ಟೂಲ್ಕಿಟ್ ಅನ್ನು ಪರಿಚಯಿಸಿದೆ. ಇದರಲ್ಲಿರುವ ಪ್ರಮುಖ ಸೇವೆಗಳು,
- ಡಿಸ್ಕ್ ಇಮೇಜಿಂಗ್
- ಲೈವ್ ಮೆಮೊರಿ ಅನಾಲಿಸಿಸ್
- ಡಾಟಾ ರಿಕವರಿ
- ಅಡ್ವಾನ್ಸ್ಡ್ ರಿಪೋರ್ಟಿಂಗ್
ಈ ಸಾಧನ ಫೋರೆನ್ಸಿಕ್ ತನಿಖಾ ವಿಧಾನದಲ್ಲಿ ಮಹತ್ವದ ಬದಲಾವಣೆ ತರಲು ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಗಣ್ಯರ ಉಪನ್ಯಾಸ
- ಡಾ. ವಿ. ಕೆ. ಸಾರಸ್ವತ್ (ನೀತಿ ಆಯೋಗ್)
- ಲೆ. ಜನರಲ್ ಎಂ.ಯು. ನಾಯರ್ (ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್)
- ಅಲೋಕ್ ರಂಜನ್ (ಎನ್ಸಿಆರ್ಬಿ)
- ರಾಜೀವ್ ಜೈನ್ (ಮಾಜಿ ಐಬಿ ನಿರ್ದೇಶಕ)
ಇವರಿಂದ ಸೈಬರ್ ಫೋರೆನ್ಸಿಕ್ಸ್, ಡಿಜಿಟಲ್ ಅಪಾಯಗಳು, ತಂತ್ರಜ್ಞಾನ ಕಾನೂನು ಮುಂತಾದ ವಿಷಯಗಳ ಕುರಿತು ಮಹತ್ವದ ಚರ್ಚೆಗಳು ನಡೆಯಿದವು.
ಡಿಜಿಟಲ್ ಫೋರೆನ್ಸಿಕ್ ಕ್ಷೇತ್ರದಲ್ಲಿ 23 ವರ್ಷಗಳ ಸೇವೆಗೆ ಗೌರವವಾಗಿ, ಪ್ರೋಡಿಸ್ಕವರ್ ಸಂಸ್ಥೆಗೆ ಎಕ್ಸಲೆನ್ಸ್ ಅವಾರ್ಡ್ ನೀಡಲಾಯಿತು.