Mundargi, Gadag : ಮುಂಡರಗಿ ಪಟ್ಟಣದ ಎಸ್.ಬಿ.ಎಸ್. ಆಯುರ್ವೇದಿಕ್ ಕಾಲೇಜಿನಲ್ಲಿ (S.B.S. Ayurvedic Medical College) ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಮತ್ತು ಸೂರ್ಯನಮಸ್ಕಾರ ಪ್ರಾತ್ಯಕ್ಷಿಕೆ ಸಮಾರಂಭವನ್ನು ಎಸ್.ಬಿ.ಎಸ್. ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಜಹಾಗೀರದಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಆರ್.ಜಹಾಗೀರದಾರ “Covid-19 ಎಂಬ ಸೂಕ್ಷ್ಮಾಣು ಇಂದು ಜಗತ್ತನ್ನು ಇನ್ನಿಲ್ಲದಂತೆ ಹೆದರಿಸುತ್ತಲಿದ್ದು, ಸಮುದಾಯದ ಆರೋಗ್ಯದ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಕರೋನ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಹೇಳಿದರು.
ಹಿರಿಯ ಉಪನ್ಯಾಸಕ ಎಂ.ಸಿ.ಪಾಟೀಲ, ಯೋಗ ಶಿಕ್ಷಕಿ ಮಂಗಳಾ ಸಜ್ಜನರ ಸೂರ್ಯನಮಸ್ಕಾರದ ಮಾರ್ಗದರ್ಶನ ನೀಡಿದರು. ಡಾ.ವೀರಣ್ಣ ಸಜ್ಜನ, ಡಾ.ಸಲ್ಮಾ ಸೀರಿನ್, ಡಾ.ಬಾನು ಎಚ್.ಸಿ., ಡಾ.ಅಶ್ವಿನಿ, ಡಾ.ಸವಿತಾ ಹುಲಿಕೇರಿ, ಸುವರ್ಣಾ ಶೇಟ, ಡಾ.ಬಿ.ಡಿ.ತಳವಾರ ಉಪಸ್ಥಿತರಿದ್ದರು.