Rona, Gadag : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿ, ಕನ್ನಡ ಬಾವುಟ ಸುಟ್ಟು ಹಾಕಿದ MES ಪುಂಡರ ಕೃತ್ಯವನ್ನು ಖಂಡಿಸಿ ರೋಣ ತಾಲ್ಲೂಕು ಕುರುಬರ ಸಂಘ, ಕರ್ನಾಟಕ ರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಬುಧವಾರ ರೋಣ ಪಟ್ಟಣದ ಸಿದ್ಧಾರೂಡ ಮಠದಿಂದ ಪ್ರತಿಭಟನೆ ಆರಂಭಿಸಿ ಸೂಡಿ, ಮುಲ್ಲಾನಭಾವಿ ವೃತ್ತ ಹಾಗೂ ಪೂತರಾಜನ ಕಟ್ಟೆಯ ಹತ್ತಿರ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪೂರ ಮಾತನಾಡಿ “ಮರಾಠ ಮಹಾಮೇಳಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎನ್ನುವ ಕಾರಣಕ್ಕೆ ಎಂಇಎಸ್ ಪುಂಡರು ಕರ್ನಾಟಕ ಬಾವುಟ ಸುಟ್ಟು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಅಶಾಂತಿ ಸೃಷ್ಟಿಸುತ್ತಿದ್ದಾರೆ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೋಣ ತಾಲ್ಲೂಕು ಕುರುಬ ಸಂಘದ ಕಾರ್ಯಾಧ್ಯಕ್ಷ ವೀರಪ್ಪ ತಾಳಿ, ರೋಣ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜ ಜಗ್ಗಲ, ವಿ.ಆರ್.ಗುಡಿಸಾಗರ, ಗುರುಬಸಪ್ಪ ಕುರಿಯವರ, ಅಂದಪ್ಪಾ ಬಿಚ್ಚೂರ, ಶಿವರಾಜ ಮಣ್ಣೂರ, ಶಂಕ್ರರಪ್ಪ ಕಳಿಗಣ್ಣವರ, ತಿಪ್ಪಣ್ಣಾ ಕುರಿ, ಮುತ್ತಣ್ಣಾ ಕೊಪ್ಪದ, ನಾಗರಾಜ ಧರ್ಮರ, ರಾಜೇಶ್ವರಿ ಹೊಸತೋಟದ, ಸುರೇಖಾ ಕುರಿ, ಸುನೀತಾ ಗುಡಿಸಾಗರ ಪಾಲ್ಗೊಂಡಿದ್ದರು.