
Gangavathi, Kopal : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ (Auto Rikshaw Accident) ಪರಿಣಾಮ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಗಂಗಾವತಿ ನಗರದ ಕನಕದಾಸ ವೃತ್ತದ ಬಳಿ ಸಂಭವಿಸಿದೆ.
ಗಂಗಾವತಿಯ ಲಯನ್ಸ್ ಶಾಲೆಯ ಸಂಜೀವ್, ಮುರ್ತುಜಾ ಬೇಗಂ, ನಿಹಾರಿಕಾ, ಸಾರಿಕಾ, ಭಾಗ್ಯಶ್ರೀ, ನಂದಿನಿ, ಸಹನಾ, ಅಶ್ವಿನಿ, ಅಭಯ್ ಮೊದಲಾದ ಮಕ್ಕಳಿಗೆ ಗಾಯಗಳಾಗಿದ್ದು ಈ ಪೈಕಿ ಇಬ್ಬರಿಗೆ ತಲೆ, ಬೆನ್ನು ಮತ್ತು ಮೂಳೆಯ ಭಾಗಕ್ಕೆ ಗಂಭೀರ ಗಾಯಗಳಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಭವಿಸುತ್ತಲೇ ಆಟೋ ಚಾಲಕ ನಾಪತ್ತೆಯಾಗಿದ್ದು, ಗಾಯಗೊಂಡ ಮಕ್ಕಳನ್ನು ಉಪವಿಭಾಗ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ. ಮೊಬೈಲ್ನಲ್ಲಿ ಮಾತನಾಡುತ್ತಾ ಆಟೋ ಚಾಲನೆ ಮಾಡುತ್ತಿದ್ದ ವೇಳೆ, ರಸ್ತೆ ಮಧ್ಯೆ ಹಂಪ್ ಬಂದ ಕಾರಣ ಸಡನ್ ಆಗಿ ಬ್ರೇಕ್ ಹಾಕಲು ಮುಂದಾದಾಗ ದುರಂತ ಸಂಭವಿಸಿದೆ ಎಂದು ಮಕ್ಕಳು ತಿಳಿಸಿದ್ದಾರೆ.