
Gauribidanur : ಗೌರಿಬಿದನೂರು ತಾಲ್ಲೂಕಿನ ಪ್ರಜಾಸೌಧದಲ್ಲಿ ಮಂಗಳವಾರ ಜಲ ಸಂವಾದ ಕಾರ್ಯಕ್ರಮ (Jal Samvada) ನಡೆಯಿತು.
ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಮಾತನಾಡಿ, ‘ಇಂದು ಶ್ರೀಮಂತ-ಬಡವ ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ನೀರನ್ನು ಖರೀದಿಸಿ ಕುಡಿಯುವ ಪರಿಸ್ಥಿತಿ ಬಂದಿದೆ. ಕೆರೆ-ಕಟ್ಟೆಗಳನ್ನು ಉಳಿಸುವುದು ಹಾಗೂ ಭೂಗರ್ಭ ಜಲವನ್ನು ಹೆಚ್ಚಿಸುವ ಕೆಲಸ ಎಲ್ಲೆಡೆ ಆಗಬೇಕು’ ಎಂದರು.
ಅವರು ಮುಂದುವರೆದು, ‘ಉತ್ತರ ಪಿನಾಕಿನಿ ನದಿ ಹಾಳಾಗಿರುವುದರಿಂದ, ಅದರ ಹಿಂದಿನ ಗತವೈಭವವನ್ನು ಮರಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ, ನಗರದ ಕಿಂಡಿ ಅಣೆಕಟ್ಟನ್ನು ಮೇಲ್ದರ್ಜೆಗೇರಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗಿದೆ’ ಎಂದರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್ ಎಸ್. ಪತ್ರಿ, ಪರಿಸರ ಪ್ರೇಮಿ ಚೌಡಪ್ಪ, ಜಿ.ಕೆ. ಹೊನ್ನಯ್ಯ, ಲಕ್ಷ್ಮಿನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಡಿ.ಎಂ. ಗೀತಾ, ನಾಗರಾಜ್ ಮತ್ತು ಅಬ್ದುಲ್ಲಾ ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
The post ನೀರಿನ ಸಂರಕ್ಷಣೆ ಬಗ್ಗೆ ಚರ್ಚೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.