
Bagepalli : ಬಾಗೇಪಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಮುಂದೆ ಸೋಮವಾರ ರಾಜ್ಯ ಪ್ರಾಂತ ರೈತ ಸಂಘದ (Farmers Association) ಸದಸ್ಯತ್ವ ಅಭಿಯಾನಕ್ಕೆ (Membership Drive) ಚಾಲನೆ ನೀಡಲಾಯಿತು. ಹಿರಿಯ CPM ಮುಖಂಡ ಎಚ್.ಎ.ರಾಮಲಿಂಗಪ್ಪ ಸದಸ್ಯತ್ವ ಪಡೆಯುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿದರು.
ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಪ್ರಾಂತ ರೈತ ಸಂಘದ ಮುಖಂಡರು ಪಟ್ಟಣದ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ 72 ದಿನಗಳ ಕಾಲ ಚಿತ್ರಾವತಿ ನೀರಿಗಾಗಿ ರೈತರು ಹೋರಾಟ ನಡೆಸಿದರು ಹಾಗೂ ಬಿಳ್ಳೂರಿನ ವಂಡಮಾನ್ ಮತ್ತು ಹಂಪಸಂದ್ರ ಕೆರೆಯಿಂದ ನೀರು ಹರಿಸಲು ಪ್ರಯತ್ನಿಸಿದರು. ರೈತರ ಹಿತಕ್ಕಾಗಿ ಹಲವು ಹೋರಾಟಗಳನ್ನು ಸಂಘಟಿಸಲಾಗಿದ್ದು ನವದೆಹಲಿಯಲ್ಲಿ ನಡೆದ ರೈತರ ಹೋರಾಟದಲ್ಲಿ ಪ್ರಾಂತ ರೈತ ಸಂಘದ ಸದಸ್ಯರು ಭಾಗಿಯಾಗಿದ್ದರು. ಈ ಹೋರಾಟದ ಪರಿಣಾಮವಾಗಿ ಕೇಂದ್ರ ಸರ್ಕಾರ ಕೃಷಿ ಮತ್ತು ವಿದ್ಯುತ್ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಇದು ರೈತರ ಗೆಲುವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಘಟನೆ ತಾಲ್ಲೂಕು ಸಂಚಾಲಕ ಡಿ.ಟಿ. ಮುನಿಸ್ವಾಮಿ, ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ಎಂ.ಎನ್. ರಘುರಾಮರೆಡ್ಡಿ, ಬಿಳ್ಳೂರು ನಾಗರಾಜ್, ಜಿ. ಕೃಷ್ಣಪ್ಪ, ದೇವಿಕುಂಟೆ ಶ್ರೀನಿವಾಸ್, ಜಿ. ಮುಸ್ತಾಫ, ಅಶ್ವತ್ಥಪ್ಪ, ಬಿ.ಎಚ್. ರಫೀಕ್, ವೆಂಕಟರಾಂ, ಚಲಪತಿ, ರವಣಪ್ಪ, ರಾಮಾಂಜಿ, ಅಬೂಬಕರ್, ಅಪ್ಪಯ್ಯ (ಸ್ವಾಮಿ) ಮತ್ತಿತರರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
The post ರಾಜ್ಯ ಪ್ರಾಂತ ರೈತ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.