Home Auto Tesla ಪ್ರಿಯರಿಗೆ ಸಿಹಿ ಸುದ್ದಿ: ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು

Tesla ಪ್ರಿಯರಿಗೆ ಸಿಹಿ ಸುದ್ದಿ: ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು

89
Tesla Cars

 

ಟೆಸ್ಲಾ (Tesla) ತನ್ನ ಎಲೆಕ್ಟ್ರಿಕ್ ಕಾರುಗಳಾದ ಮಾಡೆಲ್ ವೈ ಮತ್ತು ಮಾಡೆಲ್ 3 ಅನ್ನು ಭಾರತದಲ್ಲಿ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕಾರುಗಳಿಗೆ ಪ್ರಮಾಣೀಕರಣ ಮತ್ತು ಹೋಮೋಲೋಗೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅಮೆರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಚರ್ಚೆ ನಡೆಯುತ್ತಿರುವಾಗ ಈ ನಿರ್ಧಾರ ಕೈಗೊಳ್ಳಲಾಗಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕಾರು ಉತ್ಪಾದನಾ ಘಟಕ ಸ್ಥಾಪಿಸುವ ಮೊದಲು, ಭಾರತದಲ್ಲಿ ಆಮದು ಮಾಡಿದ ಕಾರುಗಳನ್ನು ಮಾರಾಟ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೇಡಿಕೆ ಹೆಚ್ಚುತ್ತಿರುವುದರಿಂದ, ಟಾಟಾ, MG, ಮಹೀಂದ್ರಾ, ಹುಂಡೈ ಮತ್ತಿತರ ಐಷಾರಾಮಿ ಕಂಪನಿಗಳಿಗೆ ಪೈಪೋಟಿ ನೀಡಲು ಟೆಸ್ಲಾ ಸಜ್ಜಾಗಿದೆ. ಈ ಕಾರಣಕ್ಕೆ, ತನ್ನ ಎರಡು ಜನಪ್ರಿಯ ಮಾಡೆಲ್‌ಗಳಿಗಾಗಿ ಪ್ರಮಾಣೀಕರಣ ಮತ್ತು ಹೋಮೋಲೋಗೇಶನ್ ಪ್ರಕ್ರಿಯೆ ಆರಂಭಿಸಿದೆ.

ಭಾರತೀಯ ರಸ್ತೆಗಳಲ್ಲಿ ವಾಹನಗಳು ಸುರಕ್ಷಿತವಾಗಿರಲು ಮತ್ತು ಎಲ್ಲಾ ನಿಯಮಗಳನ್ನು ಪಾಲಿಸಲು ಇದು ಅನಿವಾರ್ಯ. ಟೆಸ್ಲಾ ಇಂಡಿಯಾ ಮೋಟಾರ್ & ಎನರ್ಜಿ ಪ್ರೈವೇಟ್ ಲಿಮಿಟೆಡ್ ಈ ಸಂಬಂಧ ಅರ್ಜಿಗಳನ್ನು ಸಲ್ಲಿಸಿದೆ. ಹೋಮೋಲೋಗೇಶನ್ ಎಂಬುದು ಸರ್ಕಾರದಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ಆಗಿದ್ದು, ಇದು ವಾಹನಗಳ ಮಾಲಿನ್ಯ ನಿಯಂತ್ರಣ, ಸುರಕ್ಷತೆ ಮತ್ತು ಇನ್ನಿತರ ಮಾನದಂಡಗಳನ್ನು ಅನುಸರಿಸುತ್ತದೆಯೇ ಎಂಬುದನ್ನು ಖಚಿತಪಡಿಸುತ್ತದೆ.

ಟೆಸ್ಲಾ ಈಗಾಗಲೇ 7 ಅರ್ಜಿಗಳನ್ನು ಸಲ್ಲಿಸಿದ್ದರೆ, ಇತ್ತೀಚೆಗೆ 8ನೇ ಅರ್ಜಿಗೂ ಅನುಮೋದನೆ ದೊರಕಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಟೆಸ್ಲಾ ತೋರಿಸಿರುವ ಗಂಭೀರತೆಯನ್ನು ಹತ್ತಿರದಿಂದ ಸಾರುತ್ತದೆ. ಚೀನಾ-ಅಮೆರಿಕಾ ಮಧ್ಯೆ ವ್ಯಾಪಾರ ತಕರಾರು ಹೆಚ್ಚುತ್ತಿರುವುದು, ಭಾರತವನ್ನು ಟೆಸ್ಲಾದ ಹೊಸ ತಾಣವನ್ನಾಗಿ ಮಾಡಿದೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆ ಎಂಬುದನ್ನು ಮರೆತರೆ ಸಾಧ್ಯವಿಲ್ಲ.

ಟೆಸ್ಲಾ ತನ್ನ ಮೊದಲ ಶೋ ರೂಂ ಅನ್ನು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿ ತೆರೆಯಲು ಯೋಜನೆ ಮಾಡಿದೆ. ಈ ಉದ್ದೇಶಕ್ಕಾಗಿ 4000 ಚದರ ಅಡಿ ಜಾಗವನ್ನು 35 ಲಕ್ಷ ರೂ. ತಿಂಗಳ ಬಾಡಿಗೆಯಲ್ಲಿ ಗುತ್ತಿಗೆಗೆ ಪಡೆದಿದೆ. ಆ್ಯಪಲ್ ಕೂಡ ಇದೇ ಸ್ಥಳದಲ್ಲಿ ತನ್ನ ಮೊದಲ ಶೋ ರೂಂ ತೆರೆದಿರುವುದು ವಿಶೇಷ. ಜೊತೆಗೆ, ಟೆಸ್ಲಾ ಪಾರ್ಕಿಂಗ್ ಸ್ಥಳಗಳನ್ನೂ ಪಡೆಯಲಿದೆ. ಟೆಸ್ಲಾ ಪ್ರಿಯರಿಗಾಗಿ ಇದು ನಿಜಕ್ಕೂ ಸಿಹಿ ಸುದ್ದಿ!

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page