ಯಾವುದಾದರು ವಿಷಯದ ಬಗ್ಗೆ ಅರ್ಥವಾಗಿಲ್ಲ, ಅದರ ಬಗ್ಗೆ ಮಾಹಿತಿ ಬೇಕು ಅಂತಾದರೆ ನಾವೆಲ್ಲಾ ಮೊದಲು ಮಾಡೋದು ಗೂಗಲ್ ಅನ್ನು. ಗೂಗಲ್ (Google) ಅದೆಷ್ಟು ನಮ್ಮ ಜೀವನದಲ್ಲಿ ಅವಶ್ಯಕವಾಗಿದೆ ಅಂದರೆ ಸಣ್ಣ ಪುಟ್ಟ ಮಾಹಿತಿಗಳಿಗೂ ಗೂಗಲ್ (Google) ಇದೆ ಅನ್ನುವಷ್ಟು.
ಗೂಗಲ್ ಇದ್ದುಬಿಟ್ಟರೆ ಪ್ರಪಂಚದಲ್ಲಿನ ಎಲ್ಲಾ ಮಾಹಿತಿಯನ್ನು ಜೊತೆಗೆ ಇಟ್ಟುಕೊಂಡಷ್ಟು ಆತ್ಮವಿಶ್ವಾಸ ಬಂದುಬಿಡುತ್ತದೆ. ಹೀಗೆ ನಮ್ಮೆಲ್ಲರಿಗೂ ಸುಲಭವಾಗಿ ಮಾಹಿತಿ ಪಡೆಯಲು ಸಹಾಯಕವಾಗಿರುವ ಗೂಗಲ್ಗೆ (Google) ಇಂದು 25 ನೇ ವರ್ಷದ ಹುಟ್ಟುಹಬ್ಬ(25th birthday).
Google ಇತಿಹಾಸ
ಅಮೆರಿಕದ ಪ್ರತಿಷ್ಠಿತ ಸ್ಟಾನ್ಫೋರ್ಡ್ ಯುನಿವರ್ಸಿಟಿಯ (Stanford University) ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಗೆ ಬ್ರಿನ್ (Larry Page and Sergey Brin) ಸೆಪ್ಟೆಂಬರ್ 27, 1998ರಂದು ಗೂಗಲ್ನ್ನು ಹುಟ್ಟು ಹಾಕಿದರು. ಇಟರ್ನೆಟ್ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸಿಕೊಳ್ಳಲು ಸೌಲಭ್ಯ ನಿರ್ಮಿಸುವ ಹಂಬಲದೊಂದಿಗೆ ಗೂಗಲ್ ಜನ್ಮ ತಾಳಿತು.
ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಬ್ರಿನ್ (Larry Page and Sergey Brin)1990 ರ ದಶಕದ ಉತ್ತರಾರ್ಧದಲ್ಲಿ ಕಂಪ್ಯೂಟರ್ ವಿಜ್ಞಾನವನ್ನು (Computer Science) ಅಧ್ಯಯನ ಮಾಡುತ್ತಿದ್ದರು.
ತಮ್ಮ ಹಾಸ್ಟೆಲ್ ಕೊಠಡಿಗಳಿಂದ ಕೆಲಸ ಮಾಡುವ ಮೂಲಕ, ಇಬ್ಬರೂ ವರ್ಲ್ಡ್ ವೈಡ್ ವೆಬ್ನಲ್ಲಿ (World Wide Web) ಲಿಂಕ್ಗಳನ್ನು ಬಳಸುವ ಹುಡುಕಾಟ ಎಂಜಿನ್ (Search engine) ಅನ್ನು ರಚಿಸಿದರು. ಅವರು ಅದನ್ನು ಬ್ಯಾಕ್ರಬ್ (backrub) ಎಂದು ಕರೆದರು. ನಂತರ ಅದರ ಹೆಸರನ್ನು ಗೂಗಲ್ (Google) ಎಂದು ಬದಲಾಯಿಸಲಾಯಿತು.
Google ಹುಟ್ಟುಹಬ್ಬ ಆಚರಣೆ ವಿಶೇಷ
ಗೂಗಲ್ನ ಹುಟ್ಟುಹಬ್ಬವನ್ನು (Google’s birthday) ಈ ಹಿಂದೆ ಬೇರೆ ಬೇರೆ ದಿನಾಂಕಗಳಲ್ಲಿ ಆಚರಿಸಲಾಗುತ್ತಿತ್ತು. ಮೊದಲಿಗೆ ಸೆಪ್ಟೆಂಬರ್ 7 ರಂದು ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಂತರ ಗೂಗಲ್ ಹುಟ್ಟುಹಬ್ಬವನ್ನು 8 ರಂದು, ತದನಂತರ ಸೆಪ್ಟೆಂಬರ್ 26 ರಂದು ಆಚರಿಸಲಾಯಿತು. ನಂತರ ಕಂಪನಿಯು ಸೆಪ್ಟೆಂಬರ್ 27 ರಂದು ಅಧಿಕೃತವಾಗಿ ಗೂಗಲ್ ಹುಟ್ಟುಹಬ್ಬವನ್ನು ಆಚರಿಸಲು ಘೋಷಿಸಿತು.