Google I/O 2025 ಸಮ್ಮೇಳನದಲ್ಲಿ ಗೂಗಲ್ (Google Flow) ಹೊಸ ಫಿಲ್ಮ್ ಮೇಕಿಂಗ್ ಟೂಲ್ ‘Flow’ ಅನ್ನು ಪರಿಚಯಿಸಿದೆ. ಈ ಟೂಲ್ ಎಐ ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲಿ ವಿಡಿಯೋ ಸಿದ್ಧಪಡಿಸುವ ಸಹಾಯ ಮಾಡುತ್ತದೆ.
Flow ಉಪಕರಣವನ್ನು ಗೂಗಲ್ ತನ್ನ ಜನರೇಟಿವ್ ವಿಡಿಯೋ ಮಾದರಿ Veo ಹಾಗೂ Veo 3ಗೆ ಸಮರ್ಥವಾಗಿ ವಿನ್ಯಾಸಗೊಳಿಸಿದೆ. ಇದು ಬಳಕೆದಾರರಿಗೆ ತಮ್ಮ ಕಲ್ಪನೆಗಳನ್ನು ಸರಳ ಭಾಷೆಯಲ್ಲಿ ತಿಳಿಸಿ ಅದನ್ನು ವೀಡಿಯೋ ರೂಪದಲ್ಲಿ ತಯಾರಿಸಲು ಸಹಾಯ ಮಾಡುತ್ತದೆ.
ಬಳಕೆದಾರರು ತಮ್ಮದೇ ಕಂಟೆಂಟ್, ಪಾತ್ರಗಳು, ದೃಶ್ಯಗಳನ್ನು Flow ನಲ್ಲಿ ಸೃಷ್ಟಿಸಬಹುದು.
ಇದರ ಪ್ರಮುಖ ಹಂತಗಳು
- Text to Image: ಬರೆದ ವಿಷಯದಿಂದ ಚಿತ್ರಗಳನ್ನು ತಯಾರಿಸುವುದು
- Ingredients to Video: ಪಾತ್ರ ಮತ್ತು ದೃಶ್ಯಗಳಿಂದ ವಿಡಿಯೋ ಕ್ಲಿಪ್ ಸೃಷ್ಟಿಸುವುದು
- Frame to Video: ಸರಳ ಪದಗಳಿಂದ ಕ್ಲಿಪ್ ರಚಿಸುವುದು
Flow ಬಳಕೆದಾರರಿಗೆ ಕ್ಯಾಮೆರಾ ಚಲನೆ, ಆ್ಯಂಗಲ್, ಮತ್ತು ಶಾಟ್‌ಗಳನ್ನು ಸುಲಭವಾಗಿ ನಿಯಂತ್ರಿಸುವ ವೈಶಿಷ್ಟ್ಯಗಳನ್ನೂ ನೀಡುತ್ತದೆ. ಇದರಿಂದ ಚಿತ್ರಗಳನ್ನು ಎಡಿಟ್ ಮಾಡಿ, ಶಾಟ್‌ಗಳಲ್ಲಿ ಆ್ಯಕ್ಷನ್ ಮತ್ತು ಟ್ರಾಂಜಿಶನ್ ಸೇರಿಸಬಹುದು.
ಗೂಗಲ್ Flow ಫಿಲ್ಮ್ ಮಾಡೋದು ಈಗ ತುಂಬಾ ಸೌಕರ್ಯಕರ ಮತ್ತು ಸೃಜನಾತ್ಮಕವಾಗಿದೆ!