back to top
26.3 C
Bengaluru
Friday, July 18, 2025
HomeNewsRinku Singh ಗೆ ಸರ್ಕಾರದಿಂದ ಸನ್ಮಾನ: Cricket ತಾರೆ ಇದೀಗ ಮೂಲ ಶಿಕ್ಷಣಾಧಿಕಾರಿ!

Rinku Singh ಗೆ ಸರ್ಕಾರದಿಂದ ಸನ್ಮಾನ: Cricket ತಾರೆ ಇದೀಗ ಮೂಲ ಶಿಕ್ಷಣಾಧಿಕಾರಿ!

- Advertisement -
- Advertisement -

Lucknow: ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ರಿಂಕು ಸಿಂಗ್ (Rinku Singh) ಅವರ ಅದೃಷ್ಟ ಮತ್ತೆ ಬಿಟ್ಟಿದೆ. ಇತ್ತೀಚೆಗೆ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಲ್ಲಿದ್ದ ರಿಂಕು, ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ ಈ ಬಾರಿ ಅವರ ಆಟದ ಪಾಠಕ್ಕೆ ಗೌರವ ಸಿಕ್ಕಿದೆ!

ಟಿ20 ಕ್ರಿಕೆಟ್‌ನಲ್ಲಿ ತಮ್ಮ ವಿಶಿಷ್ಟ ಪ್ರದರ್ಶನದಿಂದ ಗಮನಸೆಳೆದಿರುವ ರಿಂಕು ಸಿಂಗ್‌ ಅವರನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮುಖ್ಯ ಹುದ್ದೆಗೆ ನೇಮಕ ಮಾಡಿ ಗೌರವಿಸಿದೆ. ಕ್ರೀಡಾಕೋಟಾದಡಿಯಲ್ಲಿ ನೇರ ನೇಮಕಾತಿ ಮೂಲಕ ರಿಂಕು ಅವರನ್ನು ಮೂಲ ಶಿಕ್ಷಣಾಧಿಕಾರಿ (BSA) ಯಾಗಿ ನೇಮಿಸಲಾಗಿದೆ. ಈ ಹುದ್ದೆ ರಿಂಕು ಅವರಿಗಾಗಿ ಕ್ರೀಡೆಗೆ ಕೊಟ್ಟಿರುವ ಸೇವೆಯನ್ನು ಸ್ಮರಿಸುವಂತೆಯೇ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಚಾಲನೆ ನೀಡುವಂತಿಯಾಗಿದೆ.

1997ರ ಅಕ್ಟೋಬರ್ 12ರಂದು ಅಲಿಗಢ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಿಂಕು, ಆರ್ಥಿಕ ಅಡಚಣೆಗಳ ನಡುವೆ ಕ್ರಿಕೆಟ್‌ನತ್ತ ಆಸಕ್ತಿಯನ್ನು ಕಳೆದುಕೊಳ್ಳದೇ ಶ್ರಮಿಸಿದರು. ತಮ್ಮ ಪರಿಶ್ರಮದಿಂದ ರಾಷ್ಟ್ರೀಯ ಮಟ್ಟಕ್ಕೆ ಬೆಳೆದು, ಇಂದು ಲಕ್ಷಾಂತರ ಯುವಕರಿಗೆ ಸ್ಫೂರ್ತಿ ಆಗಿದ್ದಾರೆ.

ಮೂಲ ಶಿಕ್ಷಣಾಧಿಕಾರಿಯಾಗಿ ರಿಂಕು ಅವರ ಜವಾಬ್ದಾರಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಾಗಿದೆ. ಇದರಿಂದ ರಾಜ್ಯ ಸರ್ಕಾರದ “ಕ್ರೀಡೆ-ಶಿಕ್ಷಣ ಸಮ್ಮಿಲನ” ಧೋರಣೆಯೂ ಸ್ಪಷ್ಟವಾಗಿದೆ.

2023ರಲ್ಲಿ ಭಾರತ ತಂಡದಲ್ಲಿ ಪ್ರವೇಶ ಪಡೆದ ರಿಂಕು, 33 ಟಿ20 ಹಾಗೂ 2 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಟಿ20ಯಲ್ಲಿ 546 ರನ್ ಗಳಿಸಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪ್ರಮುಖ ಆಟಗಾರರಾಗಿದ್ದು, 2025ರ ಹರಾಜಿಗೆ ಮೊದಲು 13 ಕೋಟಿ ರೂ.ಗೆ ಉಳಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಲಖನೌನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ, ರಾಜಕೀಯದಿಂದ ಕ್ರಿಕೆಟ್ ತಾರೆಗಳವರೆಗೆ ಅನೇಕ ಗಣ್ಯರು ಭಾಗವಹಿಸಿದ್ದರು. ಇದೀಗ ರಿಂಕು ಅವರ ಜೀವನ ಮತ್ತೊಂದು ಮಹತ್ವದ ಹಂತ ತಲುಪಿದೆ  ಕ್ರೀಡಾಪಟುವಿನಿಂದ ಶಿಕ್ಷಣಾಧಿಕಾರಿ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page