
Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ (SC Internal Reservation) ಜಾರಿಗೆ ಅಧಿಕೃತ ಆದೇಶ ಹೊರಡಿಸಿದೆ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.
ಮೀಸಲಾತಿ ಹಂಚಿಕೆಯ ವಿವರ
- ಒಟ್ಟು ಶೇ. 17 ಮೀಸಲಾತಿ ಹಂಚಿಕೆ
- ಎಡಗೈ ಸಮುದಾಯ (18 ಜಾತಿಗಳು) – ಶೇ. 6
- ಬಲಗೈ ಸಮುದಾಯ (20 ಜಾತಿಗಳು) – ಶೇ. 6
- ಇತರೆ ಸಮುದಾಯಗಳು (63 ಜಾತಿಗಳು) – ಶೇ. 5
ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಗಳನ್ನು ಎ, ಬಿ, ಸಿ, ಡಿ, ಇ ಎಂದು ಐದು ವರ್ಗಗಳಾಗಿ ವಿಭಜಿಸಿ ಒಳ ಮೀಸಲಾತಿ ಶಿಫಾರಸು ಮಾಡಿತ್ತು.
- ಎಡಗೈ – ಶೇ. 6
- ಬಲಗೈ – ಶೇ. 5
- ಲಂಬಾಣಿ, ಭೋವಿ – ಶೇ. 4
- ಅಲೆಮಾರಿ – ಶೇ. 1
- ಆದಿ ಕರ್ನಾಟಕ, ಆದಿ ದ್ರಾವಿಡ – ಶೇ. 1
ಆದರೆ ಸಚಿವ ಸಂಪುಟ ಸಭೆಯಲ್ಲಿ ಎಡಗೈಗೆ ಶೇ. 6, ಬಲಗೈಗೆ ಶೇ. 6 ಮತ್ತು ಇತರರಿಗೆ ಶೇ. 5 ಮೀಸಲಾತಿ ನೀಡಲು ತೀರ್ಮಾನ ಮಾಡಲಾಯಿತು.
ಒಳ ಮೀಸಲಾತಿಗೆ ಒಳಪಟ್ಟ ಜಾತಿಗಳು
- ಎಡಗೈ ಜಾತಿಗಳು: ಮಾದಿಗ, ಮೋಚಿ, ಹರಳಯ್ಯ, ಚಮಾರ್, ತೆಲುಗು ಮೋಚಿ, ಪನ್ನಿಯಾಂಡಿ, ರಾಣಿಗಾರ್ ಮತ್ತಿತರರು.
- ಬಲಗೈ ಜಾತಿಗಳು: ಮಾಳ, ಹೊಲಯ, ಮಹಾರ್, ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತಿತರರು.
- ಇತರೆ ಸಮುದಾಯಗಳು: ಲಂಬಾಣಿ, ಭೋವಿ, ಕೊರಚ, ಕೊರಮ, ಬಂಜಾರ, ವಡ್ಡರ, ಮುಕ್ರಿ, ಪಂಬದ ಮತ್ತಿತರರು.