
Bengaluru: ರಾಜ್ಯದ CBSC ಮತ್ತು ಸಿಐಎಸ್ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ, ಕರ್ನಾಟಕ ಹೈಕೋರ್ಟ್ (Karnataka High Court) ಮುಂದಿನ ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಅರ್ಜಿಯನ್ನು, ಸಿ. ಸೋಮಶೇಖರ್ ಎಂಬ ಪೋಷಕರು ಹಾಗೂ ಕೆಲವು ಶಿಕ್ಷಕರು ಸೇರಿ ಸಲ್ಲಿಸಿದ್ದು, ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಾಡಿದ ವಕೀಲರು, “ಇದು ಎರಡು ವರ್ಷಗಳಿಂದ ಪ್ರಸ್ತುತದಲ್ಲಿದೆ. ಆದರೆ ಸರ್ಕಾರ ಇನ್ನೂ ಸ್ಪಷ್ಟನೆ ನೀಡಿಲ್ಲ,” ಎಂದು ತಿಳಿಸಿದರು. ಹೈಕೋರ್ಟ್, “ಇದಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು, ಇಲ್ಲದಿದ್ದರೆ ಅರ್ಜಿದಾರರು ಕೇಳಿರುವ ಮಧ್ಯಂತರ ಪರಿಹಾರ ಪರಿಗಣಿಸಬಹುದು,” ಎಂದು ಎಚ್ಚರಿಕೆ ನೀಡಿತು.
ಅರ್ಜಿಯಲ್ಲಿ ಏನು ಹೇಳಲಾಗಿದೆ
ಕರ್ನಾಟಕ ಭಾಷಾ ಕಲಿಕಾ ಕಾಯಿದೆ 2015 ಮತ್ತು ಭಾಷಾ ಕಲಿಕಾ ನಿಯಮಗಳು 2017 ಪ್ರಕಾರ, ರಾಜ್ಯದ ಎಲ್ಲಾ ಸಿಬಿಎಸ್ಇ ಮತ್ತು ಸಿಐಎಸ್ಸಿಇ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಸರ್ಕಾರ ಹೇಳುತ್ತಿದೆ.
- ನಿರಪೇಕ್ಷಣಾ ಪತ್ರ (NOC) ನಿಯಮಗಳು ಪ್ರಕಾರ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಸಬೇಕು.ಈ ನಿಯಮಗಳು ಮಕ್ಕಳು ಮತ್ತು ಶಿಕ್ಷಕರಿಗೆ
- ತೊಂದರೆಯಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
- ಮಕ್ಕಳಿಗೆ ಇಚ್ಛೆಯಂತೆ ಭಾಷೆ ಕಲಿಯುವ ಹಕ್ಕು ಇದೆ. ಹಾಗಿಲ್ಲದಿದ್ದರೆ, ಅವರ ಶೈಕ್ಷಣಿಕ ಹಾಗೂ ಉದ್ಯೋಗ ಭವಿಷ್ಯಕ್ಕೆ ಹಾನಿಯಾಗುತ್ತದೆ ಎಂದು ಅವರ ಅಭಿಪ್ರಾಯ.
ಅರ್ಜಿದಾರರು, ಈ ನಿಯಮಗಳು ಸಿಬಿಎಸ್ಇ ಮತ್ತು ಸಿಐಎಸ್ಸಿಇ ಶಾಲೆಗಳ ಮೇಲೆ ಬಲವಂತವಾಗಿ ಹೇರಲಾಗುತ್ತಿದ್ದು, ನಿರಪೇಕ್ಷಣಾ ಪತ್ರವನ್ನು ತೆಗೆಸುವ ಬೆದರಿಕೆ ಇದ್ದು, ಇದು ದುರುದ್ದೇಶಪೂರಿತ ಕ್ರಮವಾಗಿದೆ ಎಂದು ಹೈಕೋರ್ಟ್ ಮುಂದೆ ತಮ್ಮ ಬೇಡಿಕೆಯನ್ನು ಸ್ಪಷ್ಟಪಡಿಸಿದ್ದಾರೆ.