back to top
21.5 C
Bengaluru
Wednesday, September 17, 2025
HomeBusinessಭಾರತೀಯ Consulting ಕಂಪನಿಗಳನ್ನು ಬೆಳಸಲು ಸರ್ಕಾರದ ಮಹತ್ವಾಕಾಂಕ್ಷೆ

ಭಾರತೀಯ Consulting ಕಂಪನಿಗಳನ್ನು ಬೆಳಸಲು ಸರ್ಕಾರದ ಮಹತ್ವಾಕಾಂಕ್ಷೆ

- Advertisement -
- Advertisement -

New Delhi: ಭಾರತದಲ್ಲಿ ವಿಶ್ವದ ಟಾಪ್-4 ಕಂಪನಿಗಳಿಗೆ ಪೈಪೋಟಿ ನೀಡಬಲ್ಲ ದೇಶೀಯ ಕನ್ಸಲ್ಟಿಂಗ್ ಸಂಸ್ಥೆಗಳನ್ನು (Indian consulting companies) ನಿರ್ಮಿಸಲು ಸರ್ಕಾರ ಮುಂದಾಗಿದೆ. ವಿದೇಶಿ ಸಂಸ್ಥೆಗಳ ಅವಲಂಬನೆ ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ.

ಪ್ರಧಾನಿ ಕಾರ್ಯಾಲಯ (PMO) ನೇತೃತ್ವದಲ್ಲಿ ಈ ಕುರಿತು ತಜ್ಞರೊಂದಿಗಿನ ಮಹತ್ವದ ಸಭೆ ಇಂದು ನಡೆಯಲಿದೆ. ಮಾಜಿ ಆರ್‌ಬಿಐ ಗವರ್ನರ್ ಹಾಗೂ ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಈ ಸಭೆಗೆ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಭೆಯಲ್ಲಿ ಆರ್ಥಿಕ ಸಲಹೆಗಾರ ಸಂಜೀವ್ ಸಾನ್ಯಾಲ್ ಅವರು ಭಾರತದಲ್ಲಿ ಜಾಗತಿಕ ಮಟ್ಟದ ಕನ್ಸಲ್ಟಿಂಗ್ ಕಂಪನಿಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ನೀಡಲಿದ್ದಾರೆ. ಅಧಿಕಾರಿಗಳಾದ ಅಜಯ್ ಸೇಠ್, ದೀಪ್ತಿ ಮುಖರ್ಜಿ, ಅರವಿಂದ್ ಶ್ರೀವಾಸ್ತವ ಮತ್ತು ಎಂ ನಾಗರಾಜು ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಇವೈ (EY), ಪಿಡಬ್ಲ್ಯುಸಿ (PwC), ಕೆಪಿಎಂಜಿ (KPMG) ಮತ್ತು ಡೆಲಾಯ್ಟ್ (Deloitte) ಈ ನಾಲ್ಕು ಸಂಸ್ಥೆಗಳು “ಬಿಗ್ ಫೋರ್” ಎಂದು ಕರೆಸಿಕೊಳ್ಳುತ್ತವೆ. ಇವು ಲೆಕ್ಕಪತ್ರ ಪರಿಶೀಲನೆ, ತೆರಿಗೆ, ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ, ಕಾನೂನು ಸಲಹೆ ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತವೆ.

ಈ ಸಂಸ್ಥೆಗಳ ಭಾರತೀಯ ಶಾಖೆಗಳು ಕಳೆದ 2023-24ರಲ್ಲಿ 38,800 ಕೋಟಿ ರೂ ಆದಾಯ ಗಳಿಸಿವೆ. ಮುಂದಿನ ಸಾಲಿನಲ್ಲಿ ಈ ಅಂಕೆ 45,000 ಕೋಟಿ ಮೀರುವ ನಿರೀಕ್ಷೆ ಇದೆ. ಭಾರತದಲ್ಲಿಯೇ ಈ ಶಾಖೆಗಳು ಅವರ ಮೂಲ ಸಂಸ್ಥೆಗಿಂತ ಹೆಚ್ಚು ಆದಾಯ ಹೊಂದಿವೆ ಎಂಬುದು ಗಮನಾರ್ಹ.

ಗ್ರ್ಯಾಂಟ್ ಥಾರ್ನ್ಟನ್, ಬಿಡಿಒ (BDO) ಮೊದಲಾದ ಇತರ ವಿದೇಶಿ ಕಂಪನಿಗಳೂ ಭಾರತದ 500 ಪ್ರಮುಖ ಕಂಪನಿಗಳಲ್ಲಿ 326ಕ್ಕೆ ಸೇವೆ ನೀಡುತ್ತಿವೆ.

ಈ ಯೋಚನೆ ಹೊಸದಲ್ಲ. 2017ರಲ್ಲಿಯೇ ಪ್ರಧಾನಿ ಮೋದಿ ವಿಶ್ವದ ಟಾಪ್ 8 ಕನ್ಸಲ್ಟಿಂಗ್ ಸಂಸ್ಥೆಗಳಲ್ಲಿ ಕನಿಷ್ಠ ನಾಲ್ಕು ಭಾರತೀಯ ಸಂಸ್ಥೆಗಳು ಇರಬೇಕು ಎಂಬ ಕನಸು ಹಂಚಿಕೊಂಡಿದ್ದರು. ಈಗ ಆ ಕನಸನ್ನು ನಿಜಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page