Search
WhatsApp alerts

Home › Karnataka

Greater Bengaluru ಸೇರಿ 7 ವಿಧೇಯಕ ವಾಪಸ್-ಸ್ಪಷ್ಟನೆ ಕೋರಿದ Governor

administrator · Published

Governor Thawar Chand Gehlot

Bengaluru: ಬಜೆಟ್ ಅಧಿವೇಶನದಲ್ಲಿ ಅಂಗೀಕೃತವಾದ ಗ್ರೇಟರ್ ಬೆಂಗಳೂರು (Greater Bengaluru Administration Bill) ಆಡಳಿತ ವಿಧೇಯಕ ಸೇರಿದಂತೆ ಏಳು ವಿಧೇಯಕಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ರಾಜ್ಯಪಾಲರು ಈ ವಿಧೇಯಕಗಳ ಬಗ್ಗೆ ಹೆಚ್ಚಿನ ಸ್ಪಷ್ಟನೆ ಕೋರಿ ಈ ನಿರ್ಧಾರ ಕೈಗೊಂಡಿದ್ದಾರೆ.

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವು ಬಿಬಿಎಂಪಿಯನ್ನು ಏಳು ಪಾಲಿಕೆಗಳಾಗಿ ವಿಭಜಿಸುವ ಬಗ್ಗೆ ಪ್ರಸ್ತಾಪ ಮಾಡಿದೆ. ಆದರೆ, ಈ ಮಾದರಿ ದೆಹಲಿಯಲ್ಲಿ ವಿಫಲವಾದ ಕಾರಣ ಬೆಂಗಳೂರಿಗೂ ಹಾನಿ ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ಪ್ರಾಧಿಕಾರ ಚುನಾಯಿತ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಹುದು ಎಂಬ ಕಾರಣಕ್ಕೆ ರಾಜ್ಯಪಾಲರು ಮರುಪರಿಶೀಲನೆಗೋಸ್ಕರ ಕಳುಹಿಸಿದ್ದಾರೆ.

ಬಾಕಿ ಇರುವ ಇತರೆ ವಿಧೇಯಕಗಳು

ರಾಜ್ಯಪಾಲರು ಹಿಂದಿರುಗಿಸಿರುವ ಇತರೆ ಆರು ವಿಧೇಯಕಗಳೂ ಸಂಬಂಧಿತ ಇಲಾಖೆಗಳಿಗೆ ಸ್ಪಷ್ಟನೆಗಾಗಿ ಕಳುಹಿಸಲಾಗಿದೆ.

  • ಕರ್ನಾಟಕ ಸಹಕಾರ ಸಂಘ ತಿದ್ದುಪಡಿ ಮಸೂದೆ 2024
  • ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ 2024
  • ಗದಗ-ಬೆಟಗೇರಿ ಉದ್ಯಮ, ಸಂಸ್ಕೃತಿ ಹಾಗೂ ಪ್ರದರ್ಶನ ಪ್ರಾಧಿಕಾರ ಮಸೂದೆ 2024
  • ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ತಿದ್ದುಪಡಿ ಮಸೂದೆ 2024
  • ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆ 2024
  • ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿವಿ ತಿದ್ದುಪಡಿ ಮಸೂದೆ 2024

ಈ ಬಾರಿಯ ಬಜೆಟ್ ಅಧಿವೇಶನದಲ್ಲಿ 28 ವಿಧೇಯಕ ಮಂಡನೆಗೊಂಡಿದ್ದು, ರಾಜ್ಯಪಾಲರು 5 ವಿಧೇಯಕಗಳಿಗೆ ಅಂಕಿತ ನೀಡಿದ್ದಾರೆ. ಆದರೆ, 7 ವಿಧೇಯಕಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಲಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, “ರಾಜ್ಯಪಾಲರು ಕೆಲವು ವಿಧೇಯಕಗಳ ಅನುಮೋದನೆಗೆ ವಿಳಂಬ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಬಡವರ ಪ್ರಕರಣಗಳನ್ನು 6 ತಿಂಗಳಲ್ಲಿ ಇತ್ಯರ್ಥಗೊಳಿಸುವ ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ

  • ಪರಿಶಿಷ್ಟ ಜಾತಿ, ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ
  • ವಕೀಲರ ಮೇಲಿನ ಹಿಂಸಾಚಾರ ತಡೆಯುವ ಕಠಿಣ ಕಾನೂನು
  • ಪರೀಕ್ಷಾ ಅಕ್ರಮ ತಡೆಯಲು 10 ವರ್ಷಗಳ ಕಠಿಣ ಶಿಕ್ಷೆ

ರಾಜ್ಯಪಾಲರು ವಾಪಸು ಕಳುಹಿಸಿದ ವಿಧೇಯಕಗಳ ಬಗ್ಗೆ ಮುಂದಿನ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page