back to top
20.2 C
Bengaluru
Saturday, July 19, 2025
HomeNewsಇಂದು GT vs LSG Match: ಕನ್ನಡಿಗನ ಮೇಲೆ BCCI ಕಣ್ಣು!

ಇಂದು GT vs LSG Match: ಕನ್ನಡಿಗನ ಮೇಲೆ BCCI ಕಣ್ಣು!

- Advertisement -
- Advertisement -

ಇಂದು IPL 2025 ನಲ್ಲಿ ಗುಜರಾತ್ ಟೈಟಾನ್ಸ್ (GT) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗುತ್ತಿವೆ. ಗುಜರಾತ್ ಈಗಾಗಲೇ ಪ್ಲೇಆಫ್ಗೆ ಹೋದರೂ, ಈ ಪಂದ್ಯದಲ್ಲಿ ಗೆಲ್ಲಲು ಸಜ್ಜಾಗಿದೆ. ಇವರು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಫೇವರಿಟ್ ಆಗಿದ್ದಾರೆ. ಆದರೆ ಲಕ್ನೋ ಕೂಡ ಹಿಂದಿನ ಪಂದ್ಯದಲ್ಲಿ ಗೆದ್ದಿದ್ದು, ಈಗಲೂ ವಿಶ್ವಾಸದೊಂದಿಗೆ ಎದುರಿಸಲು ತಯಾರಾಗಿದೆ.

ಗುಜರಾತ್ ತಂಡದ ಪ್ರಮುಖ ಬೌಲರ್ ಪ್ರಸಿದ್ಧ್ ಕೃಷ್ಣರ ಮೇಲೆ ಎಲ್ಲರ ಗಮನವಿದೆ, ಬಿಸಿಸಿಐ ವಿಶೇಷವಾಗಿ ಗಮನಿಸುತ್ತಿದೆ. ಅವರು ಮುಂದಿನ ತಿಂಗಳಿನಲ್ಲಿ ನಡೆಯುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗಾಗಿ ಆಯ್ಕೆ ಆಗಬಹುದು. IPL ನಲ್ಲಿ ಪ್ರಸಿದ್ಧ್ ಕೃಷ್ಣ ಈಗಾಗಲೇ 12 ಪಂದ್ಯಗಳಲ್ಲಿ 21 ವಿಕೆಟ್ ಪಡೆದುಕೊಂಡು ಪರ್ಪಲ್ ಕ್ಯಾಪ್ ಕೂಡ ಪಡೆದಿದ್ದಾರೆ.

GT vs LSG ಮುಂಚಿತದ ಪಂದ್ಯಗಳು

  • ಇವರೆಗೂ 6 ಬಾರಿ ಎದುರಿಸಿದ್ದಾರೆ.
  • ಗುಜರಾತ್ 4 ಬಾರಿ ಗೆದ್ದಿದೆ.
  • ಲಕ್ನೋ 2 ಬಾರಿ ಮಾತ್ರ ಗೆದ್ದಿದೆ.
  • ಗುಜರಾತ್ ಗೆದ್ದಲ್ಲಿ ಹೈಸ್ಕೋರ್ 227 ರನ್.
  • ಲಕ್ನೋ ತಂಡದ ಹೈಸ್ಕೋರ್ 186 ರನ್.

ಗುಜರಾತ್ ಟೈಟಾನ್ಸ್​ (GT) : ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್​ ಕೀಪರ್​), ರುದರ್‌ಫೋರ್ಡ್, ಶಾರುಖ್ ಖಾನ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅರ್ಷದ್ ಖಾನ್, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ.

ಲಕ್ನೋ ಸೂಪರ್ಜೈಂಟ್ಸ್​ (LSG): ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಆಯುಷ್ ಬಡೋನಿ, ಅವೇಶ್ ಖಾನ್, ಆಕಾಶ್ ದೀಪ್, ದಿಗ್ವೇಶ್ ಸಿಂಗ್ ರಾಠಿ, ರವಿ ಬಿಷ್ಣೋಯ್, ವಿಲಿಯಂ ಒರೂರ್ಕೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page