HomeKarnatakaChikkaballapuraಗುಡಿಬಂಡೆ ತಹಶೀಲ್ದಾರ ವಿರುದ್ಧ ಪ್ರತಿಭಟನೆ

ಗುಡಿಬಂಡೆ ತಹಶೀಲ್ದಾರ ವಿರುದ್ಧ ಪ್ರತಿಭಟನೆ

- Advertisement -
- Advertisement -

Gudibande : ಸರ್ಕಾರದಿಂದ ಮಂಜೂರಾಗಿರುವ ದಲಿತರ ನಿವೇಶನ, ಕೃಷಿ ಭೂಮಿಯನ್ನು ಗುಡಿಬಂಡೆ ತಹಶೀಲ್ದಾರ್ (Tahsildar) ಬಂಡವಾಳಶಾಹಿಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಗುಡಿಬಂಡೆ ತಾಲ್ಲೂಕು ಕಚೇರಿ ಬಳಿ ಗುರುವಾರ ಪ್ರತಿಭಟನೆ (Protest) ನಡೆಸಿದರು.

ತಹಶೀಲ್ದಾರ್‌ ಮನೀಶಾ ಅವರು ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದ್ದು ಈ ಬಗ್ಗೆ ಬುಧವಾರ ಅವರನ್ನು ಭೇಟಿಯಾಗಿ ಆಕ್ಷೇಪ ಸಲ್ಲಿಸಲಾಗಿದೆ. ಅದಕ್ಕೆ ಅವರು ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಒಕ್ಕೂಟದ ಜಿ.ವಿ.ಗಂಗಪ್ಪ ತಿಳಿಸಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅದಿನಾರಾಯಣಪ್ಪ, ಇಸ್ಕೂಲಪ್ಪ, ಮುನಿಯಪ್ಪ, ಜೀವಿಕಾ ನಾರಾಯಣಸ್ವಾಮಿ, ಚನ್ನರಾಯಪ್ಪ, ಅಮರಾವತಿ, ಚಂಡೂರು ರಮಣ, ಅಶ್ವಥಪ್ಪ, ಕದಿರಿಶೆಟ್ಟಿಹಳ್ಳಿ ತಿಮ್ಮಕ್ಕ, ನಾಗರಾಜ್, ದೊಡ್ಡನಂಚರ್ಲು ಹನುಮಂತು, ಸರಸ್ವತಮ್ಮ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

The post ಗುಡಿಬಂಡೆ ತಹಶೀಲ್ದಾರ ವಿರುದ್ಧ ಪ್ರತಿಭಟನೆ appeared first on Chikkaballapur.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!