Tuesday, April 16, 2024
HomeKarnatakaChikkaballapuraಉರ್ದು ಸಾಹಿತ್ಯ ಸಮ್ಮೇಳನ

ಉರ್ದು ಸಾಹಿತ್ಯ ಸಮ್ಮೇಳನ

Gudibande : ಗುಡಿಬಂಡೆ ಪಟ್ಟಣದ ಬಾಪೂಜಿ ನಗರದ ಶಾದಿ ಮಹಲ್‌ನಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ (Karnataka Urdu Sahitya Parishat) ವತಿಯಿಂದ 7ನೇ ಉರ್ದು ಸಾಹಿತ್ಯ ಸಮ್ಮೇಳನವನ್ನು (Urdu Sahitya Sammelana) ಆಯೋಜಿಸಿ ಉರ್ದು ಕುರಿತು ಕನ್ನಡ ಭಾಷೆಯಲ್ಲಿ ಪುಸ್ತಕ ಬರೆಯಲು ಮುಂದಾಗಿರುವ ಕವಿ ದೂರವಾಣಿ ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಉರ್ದು ಅಕಾಡೆಮಿ ಮಾಜಿ ಸದಸ್ಯ ಷಫಿಕ್ ಅಬಿದಿ ” ಕನ್ನಡಿಗರಾದ ನಾವು ಕನ್ನಡ ಮತ್ತು ಇತರೆ ಮಾತೃಭಾಷೆಗಳಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಉರ್ದು ಭಾಷೆಗೂ ನೀಡಿ ಉರ್ದು ಭಾಷೆಯಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು” ಎಂದು ಹೇಳಿದರು.

ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಓದಿಗೆ ಕುತ್ತು ಒದಗುವ ಸಾಧ್ಯತೆಯಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಮಾಡಿಕೊಳ್ಳಬೇಕು. ಪುರಾತನ ಇತಿಹಾಸ ಹೊಂದಿದ ಉರ್ದು ಬಗ್ಗೆ ಅನೇಕರು ನಿರ್ಲಕ್ಷ್ಯ ತೋರುತ್ತಿದ್ದು ಕನ್ನಡ ಭಾಷೆಯಂತೆ ಉರ್ದು ಭಾಷೆಯನ್ನು ಸಹ ಉಳಿಸಿ ಉರ್ದು ಶಾಲೆಗಳ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ಶಿಕ್ಷಣ ಇಲಾಖೆಯ TPO ಡಾ.ಪ್ರಕಾಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಉರ್ದು ಶಾಲೆಯ ವಿದ್ಯಾರ್ಥಿಗಳು ಕವನಗಳು, ಗೀತೆಗಳು ಹಾಗೂ ಶಾಯಿರಿ ಹಾಡಿದರು. ಕರ್ನಾಟಕ ಉರ್ದು ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಾಸೀರ್, ಉರ್ದು ಅಕಾಡೆಮಿ ಮಾಜಿ ಸದಸ್ಯರಾದ ಮುಬೀನ್ ಮುನಾವರ್, ಅಲಿಪುರ್ ನತಿಕ್ ಅಲಿ, ಪ.ಪಂ. ಸಿಡಿಪಿಒ ರಫೀಕ್, ಪ.ಪಂ. ಸದಸ್ಯೆ ನಗೀನ್ ತಾಜ್, ನಿವೃತ್ತ ಶಿಕ್ಷಕ ವೆಂಕಟೇಶ್, ಮುಖಂಡರಾದ ರಿಯಾಜ್ ಸಮಿಉಲ್ಲಾ, ಹಫೀಜ್ ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

- Advertisement -

 

 

 

For Daily Updates WhatsApp ‘HI’ to 7406303366

RELATED ARTICLES
- Advertisment -

Most Popular

Karnataka

India

You cannot copy content of this page