Tuesday, October 4, 2022
HomeKarnatakaMysuruH.D.ಕೋಟೆ ಹುಲಿ ಪತ್ತೆಗಾಗಿ ಕೂಂಬಿಂಗ್‌

H.D.ಕೋಟೆ ಹುಲಿ ಪತ್ತೆಗಾಗಿ ಕೂಂಬಿಂಗ್‌

Heggadadevankote (H.D. Kote), Mysuru District : ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿರುವ ಹುಲಿಯ ( Tiger) ಸೆರೆಗೆ ಅರಣ್ಯ ಇಲಾಖೆಯ ಕಾರ್ಯಾಚರಣೆಯ ಎರಡನೇ ದಿನವಾದ ಬುಧವಾರವೂ ಹುಲಿ ಪತ್ತೆ ಆಗಿಲ್ಲ. ಹುಲಿಯ ಪತ್ತೆಗೆ ಸುಮಾರು ಇಪ್ಪತ್ತು ಕ್ಯಾಮೆರಾಗಳನ್ನು (Camera) ಅಳವಡಿಸಲಾಗಿದ್ದು, ಮಂಗಳವಾರ ಮತ್ತು ಬುಧವಾರ ಕ್ಯಾಮೆರಾದಲ್ಲಿ ಹುಲಿಯ ದೃಶ್ಯ ಸೆರೆಯಾಗಿಲ್ಲ. ಹೀಗಾಗಿ ಹುಲಿ ಕಾಡಿನ ಕಡೆಗೆ ಹೋಗಿರಬಹುದು ಎಂದು ಊಹಿಸಲಾಗಿದೆ.

ಅಧಿಕಾರಿಗಳು ಬುಧವಾರ ಮಧ್ಯಾಹ್ನದಿಂದ ದಸರಾ ಆನೆ ಅರ್ಜುನ (Dasara Elephant Arjuna) ಮತ್ತು ಆನೆಚೌಕೂರು ಕೇಂದ್ರದ ಮಹೇಂದ್ರ ಎಂಬ ಆನೆಯನ್ನು ಬಳಸಿಕೊಂಡು ಕೂಂಬಿಂಗ್‌ ಕಾರ್ಯಾಚರಣೆ ಆರಂಭಿಸಿದ್ದು ಗುರುವಾರದಿಂದ ಇನ್ನಷ್ಟು ಆನೆಗಳನ್ನು ಕರೆತರಲು ಸಿದ್ಧತೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page