back to top
19.2 C
Bengaluru
Sunday, January 19, 2025
HomeSportsCricketCaptain ಸ್ಥಾನದಿಂದ ಹರ್ಮನ್​ಪ್ರೀತ್​ ಕೌರ್ ​ರನ್ನು​ ಕೆಳಗಿಳಿಸುವ ಸಾಧ್ಯತೆ

Captain ಸ್ಥಾನದಿಂದ ಹರ್ಮನ್​ಪ್ರೀತ್​ ಕೌರ್ ​ರನ್ನು​ ಕೆಳಗಿಳಿಸುವ ಸಾಧ್ಯತೆ

- Advertisement -
- Advertisement -

​ಭಾರತ ಮಹಿಳಾ ತಂಡದ (Indian women’s Cricket team) ನಾಯಕಿ (captain) ಹರ್ಮನ್​ಪ್ರೀತ್​ ಕೌರ್ (Harmanpreet Kaur) ಅವರನ್ನು Team India ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಮಹಿಳಾ ಟಿ20 ವಿಶ್ವಕಪ್ 2024 ರಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿದ್ದು, ಇದರ ಬೆನ್ನಲ್ಲೇ ನಾಯಕಿಹರ್ಮನ್​ಪ್ರೀತ್​ ಕೌರ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ.

ಈ ಬಗ್ಗೆ ಚರ್ಚಿಸಲು BCCI ಆಯ್ಕೆ ಸಮಿತಿ ವಿಶೇಷ ಸಭೆ ಕರೆದಿದ್ದು, ಹೀಗಾಗಿ ಮುಂಬರುವ ಸರಣಿಗೂ ಮುನ್ನ ಹರ್ಮನ್​ಪ್ರೀತ್​ ಕೌರ್ ಅವರ ತಲೆದಂಡವಾಗಲಿದೆ ಎಂದು ವರದಿಯಾಗಿದೆ.

ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಒಂಬತ್ತನೇ ಆವೃತ್ತಿಯಿಂದ ಟೀಮ್ ಇಂಡಿಯಾ ವನಿತೆಯರು ಹೊರಬಿದ್ದಿದ್ದಾರೆ. ಸೆಮಿಫೈನಲ್ ಹಂತಕ್ಕೆ ತಲುಪಲು ಭಾರತ ತಂಡ ವಿಫಲವಾಗಿದ್ದಿ, BCCI ಮಹಿಳಾ ತಂಡಕ್ಕೆ ಹೊಸ ನಾಯಕಿಯನ್ನು ನೇಮಕ ಮಾಡಲು ಉತ್ಸುಕವಾಗಿದೆ ಎಂದು ವರದಿಗಳು ತಿಳಿಸಿವೆ.

2016ರ ಟಿ20 ವಿಶ್ವಕಪ್ ಸೋಲಿನ ಬಳಿಕ ಹರ್ಮನ್​ಪ್ರೀತ್​ ಕೌರ್​ಗೆ ನಾಯಕತ್ವ ನೀಡಲಾಗಿತ್ತು. ಕೌರ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಆರಂಭಿಕ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಆದರೆ 2020 ರ ಬಳಿಕ ಭಾರತ ತಂಡದಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡು ಬಂದಿಲ್ಲ.

35 ವರ್ಷದ ಆಟಗಾರ್ತಿಯನ್ನು ಇನ್ನೂ ಸಹ ನಾಯಕಿಯಾಗಿ ಮುಂದುವರೆಸುತ್ತಿರುವ ಬಗ್ಗೆ ಮಾಜಿ ಆಟಗಾರ್ತಿಯರು ಪ್ರಶ್ನಿಸಿದ್ದಾರೆ. ಏಕೆಂದರೆ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದ್ದು, ಇದಾದ ಬಳಿಕ ಕೆಲ ಪ್ರಮುಖ ಸರಣಿಗಳನ್ನು ಸಹ ಆಡಬೇಕಿದೆ.

ಹಾಗಾಗಿ ಭವಿಷ್ಯದ ದೃಷ್ಟಿಯಲ್ಲಿ BCCI ಹೊಸ ನಾಯಕಿಯನ್ನು ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ತಿಳಿಸಿದ್ದಾರೆ.

ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ಮಹಿಳಾ ತಂಡದ ನಾಯಕಿ ಬದಲಾದರೂ ಅಚ್ಚರಿಪಡಬೇಕಿಲ್ಲ. ಇಲ್ಲಿ ಹೊಸ ನಾಯಕಿಯರ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೊಡಿಗ್ರಸ್ ಹೆಸರು ಮುಂಚೂಣಿಯಲ್ಲಿದ್ದು, ಇವರಲ್ಲಿ ಒಬ್ಬರಿಗೆ ಕ್ಯಾಪ್ಟನ್ ಪಟ್ಟ ಸಿಗುವ ಸಾಧ್ಯತೆಯಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page