Haveri : ರಾಣೆಬೆನ್ನೂರು ತಾಲ್ಲೂಕುಗಳ ಸ್ಥಿರಾಸ್ತಿಗಳ ಮೇಲಿನ ಈಗಿನ ಮಾರುಕಟ್ಟೆ ಬೆಲೆಯನ್ನು ಯಥಾಸ್ಥಿತಿ ಕಾಪಾಡಿ, ನಿವೇಶನ ದರವನ್ನು (Property Tax) ದುಪ್ಪಟ್ಟು ಮಾಡಲು ಸರ್ಕಾರಕ್ಕೆ ಕಳಿಸಿದ ಪ್ರಸ್ತಾವ ಕೈ ಬಿಡಬೇಕೆಂದು ರೈತ ಸಂಘಟನೆ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ಮಾಡಿ ತಹಶೀಲ್ದಾರ್ ಶಂಕರ್ ಜಿ.ಎಸ್ ಅವರಿಗೆ ಮನವಿ ಸಲ್ಲಿಸಿದರು.
ಕೊರೊನಾದಿಂದ ರಾಜ್ಯದಲ್ಲಿ ಸಾರ್ವಜನಿಕರು ಮತ್ತು ರೈತರ ಜೀವನ ಸಂಕಷ್ಟಕ್ಕೊಳಗಾಗಿದೆ. ಈಗಿದ್ದ ಜಮೀನು ಹಾಗೂ ನಿವೇಶನಗಳ ಬೆಲೆಯನ್ನು ದುಪ್ಪಟ್ಟು ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಇದರಿಂದ ರೈತರಿಗೆ ಹಾಗು ಸಾರ್ವಜನಿಕರಿಗೆ ತೊಂದರೆಯಾಗಿತ್ತದೆ. ಸ್ಥಿರಾಸ್ತಿಯ ಮೌಲ್ಯವನ್ನು ಯಾವುದೇ ಕಾರಣಕ್ಕೂ ಹೆಚ್ಚು ಮಾಡಬಾರದು. ಹೆಚ್ಚಳ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಇದಕ್ಕೆ ಉತ್ತರಿಸುತ್ತೇವೆ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು.
ಹುಚ್ಚಪ್ಪ ಮೇಡ್ಲೇರಿ, ಆರ್.ಎನ್. ಕೆಂಚರಡ್ಡಿ, ಮೋಹನ ಬೆನ್ನೂರು, ಕಿರಣಕುಮಾರ ಬೆನ್ನೂರ, ನಾಗೇಶ ಕುಂದಾಪುರ, ಗಿರೀಶ ಕಮ್ಮಾರ, ಮಂಜುನಾಥ ದುಗ್ಗತ್ತಿ, ಗೋವಿಂದರಡ್ಡಿ, ಸುರೇಶ ದೊಡ್ಡಮನಿ, ಹನುಮಂತಪ್ಪ ಹೆದ್ದೇರಿ, ಸಿದ್ದಪ್ಪ ಮೂಗಿನವರ, ದಿಲೀಪ ಹಿರೇಮಠ, ನಿಂಗಪ್ಪ ಸತ್ಯಪ್ಪನವರ, ಬಸವರಾಜ ಮಡಿವಾಳರ, ಶಿವಕುಮಾರ ಬಣಕಾರ, ಮಲ್ಲಪ್ಪ ದೇವರಡ್ಡಿ, ಹನುಮಂತಪ್ಪ ಮೂಲಿಮನಿ, ಗೌರಮ್ಮ ಮುಷ್ಟೂರ, ಗಂಗಮ್ಮ ಹೊಸಳ್ಳಿ, ಗೀತಾ ಕಟಗೇರ, ರೇಮಾ ಎಮ್ಮೇರ, ನಾಗೇಶ ದೊಡ್ಡಮನಿ, ಪವನ ದೊಡ್ಡಮನಿ, ಹನುಮಂತಪ್ಪ ಹರನಗಿರಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.