Home Health ಮೂತ್ರ ವಿಸರ್ಜನೆಗೆ ತೊಂದರೆ ಇದೆಯೇ? ಇದು Urinary Retention ಆಗಿರಬಹುದು!

ಮೂತ್ರ ವಿಸರ್ಜನೆಗೆ ತೊಂದರೆ ಇದೆಯೇ? ಇದು Urinary Retention ಆಗಿರಬಹುದು!

145
Urinary Retention


ಮೂತ್ರ ವಿಸರ್ಜನೆ ನಮ್ಮ ದೇಹದ ತ್ಯಾಜ್ಯವನ್ನು ಹೊರಹಾಕುವ ನೈಸರ್ಗಿಕ ವಿಧಾನವಾಗಿದೆ. ಇದು ದೇಹವನ್ನು ಸ್ವಚ್ಛವಾಗಿಡಲು ಸಹಾಯಕವಾಗುತ್ತದೆ. ಕೆಲವೊಮ್ಮೆ, ಈ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಬಹುದು – ಉರಿ, ಹೊಟ್ಟೆ ನೋವು, ಅಥವಾ ಪದೇಪದೇ ಮೂತ್ರ ವಿಸರ್ಜನೆಯ ಅಗತ್ಯತೆ ಮುಂತಾದ ಲಕ್ಷಣಗಳು ಕಾಣಿಸಬಹುದು.

ಯುರಿನರಿ ರಿಟೆನ್ಶನ್ ಎಂದರೇನು?: ಇದು ಮೂತ್ರವಿಸರ್ಜನೆ ಮಾಡಬೇಕೆಂಬ ಪ್ರೇರಣೆ ಇದ್ದರೂ, ಮೂತ್ರಕೋಶವನ್ನು ಸಂಪೂರ್ಣ ಖಾಲಿ ಮಾಡಲು ಸಾಧ್ಯವಾಗದ ಸ್ಥಿತಿ. ಕೆಲವೊಮ್ಮೆ ಮೂತ್ರವನ್ನು ತಡೆಯಲಾಗದು, ಅಥವಾ ಕೆಲವು ಬಾರಿ ಮೂತ್ರಕೋಶದಲ್ಲಿ ಮೂತ್ರ ಉಳಿಯುತ್ತದೆ. ಇದು ಗಂಭೀರ ಸಮಸ್ಯೆಗಳ ಪ್ರಾರಂಭವಾಗಬಹುದು.

ಯುರಿನರಿ ರಿಟೆನ್ಶನ್‌ನ ಪರಿಣಾಮಗಳು

  • ಹೊಟ್ಟೆ ನೋವು
  • ಮೂತ್ರಕೋಶ ಉಬ್ಬು
  • ಮೂತ್ರನಾಳದ ಸೋಂಕು
  • ದೀರ್ಘಕಾಲದ ಕಿಡ್ನಿ ಹಾನಿ

ಇದಕ್ಕೆ ಕಾರಣವೇನು?

  • ಒತ್ತಡ ಹಾಗೂ ಮಾನಸಿಕ ಆತಂಕ
  • ಕಡಿಮೆ ನಾರಿ ಇರುವ ಆಹಾರ
  • ನೀರಿನ ಕೊರತೆ
  • ಜಂಕ್ ಫುಡ್ ಸೇವನೆ
  • ದೀರ್ಘ ಕಾಲ ಕೂತಿರುವುದು
  • ನಿರಂತರವಾಗಿ ಮೂತ್ರ ತಡೆಯುವ ಅಭ್ಯಾಸ

ದಿನಚರಿಯಲ್ಲಿ ಸರಿಯಾದ ನಿರ್ವಹಣೆಯ ಅಗತ್ಯ: ಕಚೇರಿಗಳಲ್ಲಿ ಅಥವಾ ಆನ್ಲೈನ್ ಕೆಲಸ ಮಾಡುವವರು ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕೂತಿರುವುದು ಯುರಿನರಿ ರಿಟೆನ್ಶನ್‌ಗೆ ಕಾರಣವಾಗಬಹುದು. ಕೆಲಸದ ಒತ್ತಡದಿಂದಾಗಿ ಹಲವರು ತಮ್ಮ ಮೂತ್ರವನ್ನು ತ ತಡೆದಿಡುತ್ತಾರೆ  – ಇದು ದೈಹಿಕವಾಗಿ ತುಂಬಾ ಹಾನಿಕಾರಕ.

ತಡೆಯುವುದು ಹೇಗೆ?

  • ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯಿರಿ
  • ಯಾವುದೇ ಕಾರಣಕ್ಕೂ ಮೂತ್ರವನ್ನು ತಡೆಯಬೇಡಿ
  • ನೈರ್ಮಲ್ಯಕ್ಕೆ ಗಮನ ನೀಡಿ
  • ಬಿಗಿಯಾದ ಉಡುಪನ್ನು ತಪ್ಪಿಸಿ
  • ಅನಗತ್ಯವಾದ ಆಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ
  • ಯೋಗ, ಧ್ಯಾನದ ಅಭ್ಯಾಸದಿಂದ ಮಾನಸಿಕ ಒತ್ತಡವನ್ನು ಕಡಿಮೆಮಾಡಿ

ಗಮನಿಸಿ: ಈ ಮಾಹಿತಿಯನ್ನು ವೈದ್ಯಕೀಯ ಸಲಹೆಯಂತೆಯೇ ಪರಿಗಣಿಸಬೇಡಿ. ಹೆಚ್ಚಿನ ಮಾಹಿತಿಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page